ಉಡುಪಿ: ಹಿಂದಿ ಹೇರಿಕೆ ಸಾಂಸ್ಕೃತಿಕ ಭಯೋತ್ಪಾದನೆ ಎಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿರುವ ಸಚಿವೆ ಶೋಭಾ ಕರಂದ್ಲಾಜೆ, ಅಮಿತ್ ಶಾ ಹೇಳಿಕೆಗೆ ಸಿದ್ದರಾಮಯ್ಯ ಸಾವರ್ಕರ್ ಹೆಸರು ತಂದಿದ್ದಾರೆ. ಆಲ್ ಖೈದಾ ಅಂದಾಗ ಸಿದ್ದರಾಮಯ್ಯ ಆರೆಸ್ಸೆಸ್ ಅನ್ನುತ್ತಾರೆ.ಹಿಂದಿಯ ವಿಚಾರ ಬಂದಾಗ ಸಾವರ್ಕರ್ ಹೆಸರು ಹೇಳುತ್ತಾರೆ. ಒಟ್ಟಾರೆ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ತಮ್ಮ ಬಗ್ಗೆ ತಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು.. ಸಿದ್ದರಾಮಯ್ಯ ಎಲ್ಲಿದ್ದಾರೆ, ಯಾವ ಜಾಗದಲ್ಲಿದ್ದಾರೆ ಯಾವ ಜವಾಬ್ದಾರಿಯಲ್ಲಿದ್ದಾರೆ? ಯಾವ ಪಕ್ಷದಲ್ಲಿದ್ದಾರೆ? ಎಂಬುದನ್ನು ಯೋಚನೆ ಮಾಡಿ ಮಾತನಾಡಬೇಕು.ಆಗ ಅವರ ಗೌರವ ಹೆಚ್ಚಾಗುತ್ತದೆ. ಅವರು ಮಾತನಾಡುವ ಭಾಷೆ ಮತ್ತು ವಿಚಾರದಿಂದ ನಮಗೆ ಯಾರಿಗೂ ನಷ್ಟವಿಲ್ಲ. ಅವರ ಗೌರವ ಎಲ್ಲಿದೆ ಎಂದು ಹುಡುಕುವ ದಿನ ಬರುತ್ತದೆ ಎಂದು ಉಡುಪಿಯಲ್ಲಿ ಕೇಂದ್ರ ಸಚಿವೆ ಹೇಳಿದ್ದಾರೆ.
PublicNext
08/04/2022 07:30 pm