ಉಡುಪಿ: ಆರ್‌ಟಿಐ ಕಾರ್ಯಕರ್ತರು ಏಕಾಂಗಿಯಾಗಿ ಹೋರಾಟಮಾಡಬಾರದು.ಸಂಘಟನೆ ಮೂಲಕ ಹೋರಾಡಿದಾಗ ಹೋರಾಟಕ್ಕೆ ಹೆಚ್ಚು ಬಲ ಬರುತ್ತದೆ ಎಂದು ರಾಜ್ಯ ಮಾಹಿತಿ ಹಕ್ಕು ಹೋರಾಟಗಾರರ ವೇದಿಕೆಯ ಎಚ್. ಜಿ. ರಮೇಶ್ ಹೇಳಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ,ಆರ್‌ಟಿಐ ಕಾರ್ಯಕರ್ತರ ಜೀವ ಅಪಾಯದಲ್ಲಿದೆ.ಈಗಾಗಲೇ ಹಲವರ ಕೊಲೆಗಳಾಗಿವೆ.ಏಕಾಂಗಿಯಾಗಿ ಹೋರಾಟ ಮಾಡುವವರಿಗೆ ಬೆದರಿಕೆ ಹಾಕಲಾಗುತ್ತದೆ.ಅವರ ಮೇಲೆ ಕೇಸುಗಳನ್ನು ಹಾಕಲಾಗುತ್ತಿದೆ.ಮಾಹಿತಿ ಹಕ್ಕು ಹೋರಾಟಗಾರರು ಒಂದು ವೇದಿಕೆಯಡಿ ಬರಬೇಕು ಎಂಬ ಉದ್ದೇಶದಿಂದ ಈ ವೇದಿಕೆಯನ್ನು ಹುಟ್ಟು ಹಾಕಿದ್ದೇವೆ.ಹೀಗಾಗಿ ಎಲ್ಲ ಆರ್‌ಟಿಐ ಕಾರ್ಯಕರ್ತರು ಮತ್ತು ಸಾಮಾಜಿಕ ಹೋರಾಟಗಾರರು ಒಂದೇ ವೇದಿಕೆಯಡಿ ಬರಬೇಕು ಎಂದು ಹೇಳಿದ್ದಾರೆ.
Kshetra Samachara
08/04/2022 03:20 pm