ಉಡುಪಿ: ಅಲ್ ಖೈದಾವನ್ನು ಆರ್‌ಎಸ್‌ಎಸ್‌ಗೆ ಹೋಲಿಸಿದ ಸಿದ್ದರಾಮಯ್ಯರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿದರೆ ಕಾಂಗ್ರೆಸ್ ಪಕ್ಷ ಉಳಿಯುತ್ತೆ ಎಂದು ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ಮಾಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವೆ, ಸಿದ್ದರಾಮಯ್ಯನವರು ಜವಾಬ್ದಾರಿ ಹೊತ್ತ ವಿಪಕ್ಷ ನಾಯಕ. ಮೇಲಾಗಿ ಅವರೊಬ್ಬ ವಕೀಲರು. ಅಂಥವರು ಅಲ್ ಖೈದಾ ಸಂಘಟನೆಯನ್ನು ಆರ್‌ಎಸ್ಎಸ್ ಜೊತೆ ಹೋಲಿಕೆ ಮಾಡುತ್ತಾರೆ. ಅವರ ಈ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ಬೆಂಬಲ ಇದೆಯೇ? ಎಂಬುದನ್ನು ಸ್ಪಷ್ಟಪಡಿಸಬೇಕು. ಆರಗ ಜ್ಞಾನೇಂದ್ರ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಆದರೆ ಸಿದ್ದರಾಮಯ್ಯನವರು ಕ್ಷಮೆಯಾಚಿಸುತ್ತಾರಾ ಎಂಬುದು ಪ್ರಶ್ನೆ ಎಂದು ಹೇಳಿದ್ದಾರೆ.
PublicNext
08/04/2022 02:56 pm