ಶಿರ್ವ: ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯ ಮನೆ ತೆರವು ವಿಚಾರದಲ್ಲಿ ಪ್ರತಿಭಟನೆ ನಡೆದು, ಬಳಿಕ ತಳ್ಳಾಟ ಆಗಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಶರ್ಟ್ ಹರಿದ ಪ್ರಸಂಗ ಇವತ್ತು ನಡೆದಿದೆ.
ಶಿರ್ವ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತ ಮನೆ ತೆರವುಗೊಳಿಸಿದ್ದನ್ನು ಖಂಡಿಸಿ ಮಾಜಿ ಸಚಿವ ಸೊರಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಶಿರ್ವ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಪ್ರತಿಭಟನೆ ವೇಳೆ ಸೊರಕೆ ಮತ್ತು ಗ್ರಾಮ ಪಂಚಾಯತ್ ಪಿಡಿಒ ಜೊತೆ ಮಾತಿನ ಚಕಮಕಿ ನಡೆದಿದೆ.
ಮಾತಿನ ಚಕಮಕಿಯ ವೇಳೆ ತಳ್ಳಾಟ ನಡೆದಿದ್ದು ಈ ವೇಳೆ ಮಾಜಿ ಸಚಿವರ ಶರ್ಟ್ ಹರಿದಿದೆ.
ಈ ವೇಳೆ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಿಜೆಪಿ ಕಾರ್ಯಕರ್ತರು ಬಂದಿದ್ದು,ಬಿಜೆಪಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತನ ನಡುವೆ ಚಕಮಕಿ ನಡೆದಿದೆ.ಈ ಕೃತ್ಯದಲ್ಲಿ ಬಿಜೆಪಿ ಕುಮ್ಮಕ್ಕಿದೆ ಎಂದು ಕಾಂಗ್ರೆಸ್ ಆರೋಪಿಸಿದಾಗ ಮಾಜಿ ಸಚಿವರ ಜೊತೆ ಬಿಜೆಪಿ ಕಾರ್ಯಕರ್ತರು ನೇರ ಸಂಘರ್ಷಕ್ಕಿಳಿದಿದ್ದಾರೆ.
ಒಟ್ಟಾರೆ ಗ್ರಾಮ ಪಂಚಾಯತ್ ಕಚೇರಿ ಮುಂದೆ ಹೈಡ್ರಾಮಾ ನಡೆದಿದ್ದು, ಕಟ್ಟಡ ತೆರವು ಮಾಡಿದ ಪಿಡಿಒ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
Kshetra Samachara
05/04/2022 02:08 pm