ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ಸಿಗರಿಗೆ ಕೆಲ ವಿಚಾರ ನೆನಪಾಗುತ್ತೆ: ಸಚಿವ ಕೋಟ ವ್ಯಂಗ್ಯ

ಕುಂದಾಪುರ: ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ಸಿಗರಿಗೆ ಕೆಲ ವಿಚಾರಗಳು ನೆನಪಾಗುತ್ತವೆ. ಆದರೆ ಜನರು ಕಾಂಗ್ರೆಸ್ ಪ್ರತಿಭಟನೆಗಳಿಗೆ ಹೆಚ್ಚು ಮೌಲ್ಯ ಕೊಟ್ಟಂತೆ ಕಾಣಿಸುತ್ತಿಲ್ಲ ಎಂದು ಸಚಿವ ಕೋಟ ವ್ಯಂಗ್ಯ ಮಾಡಿದ್ದಾರೆ.

ಕುಂದಾಪುರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ಪ್ರತಿಭಟನೆಗಳಂತಹ ಚಟುವಟಿಗಳನ್ನು ನಡೆಸುವುದು ಕಾಂಗ್ರೆಸ್ ಸಂಪ್ರದಾಯಗಳಲ್ಲೊಂದು. ಏಕಾಏಕಿ ಕಾಂಗ್ರೆಸ್ ಸ್ನೇಹಿತರಿಗೆ ಕೆಲವು ವಿಚಾರ ನೆನಪಾಗಿ ಬಿಡುತ್ತೆ. ಈಗ ಮೇಕೆದಾಟು, ಕೃಷ್ಣ ಮೇಲ್ದಂಡೆ, ನೀರಾವರಿ, ಬೆಲೆ ಏರಿಕೆ ನೆನಪಾಗಿದೆ. ಸಹಜವಾಗಿಯೇ ಈ ಬಾರಿಯೂ ಕಾಂಗ್ರೆಸ್‌ಗೆ ಬೆಲೆ‌ ಏರಿಕೆ ನೆನಪಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೇ ಪ್ರತಿಭಟನೆ ನಡೆಸಬಹುದು. ಸತ್ಯಾಂಶ ಗಮನಿಸಿ‌ ಸರ್ಕಾರ ಕ್ರಮ ಕೈಗೊಳ್ಳುವುದು ರೂಢಿ. ಆದರೆ ಕಾಂಗ್ರೆಸ್ ಮುಂಬರುವ ಚುನಾವಣೆಯ ದೃಷ್ಠಿಯಿಂದ‌ ಇಂತಹ ಪ್ರತಿಭಟನೆಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.

Edited By : Manjunath H D
PublicNext

PublicNext

01/04/2022 05:37 pm

Cinque Terre

39.62 K

Cinque Terre

4

ಸಂಬಂಧಿತ ಸುದ್ದಿ