ಮಂಗಳೂರು: ಕಂಬಳ ಕ್ರೀಡೆಯಲ್ಲಿ ಯುವಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರು ಈ ಬಾರಿ ಸ್ವತಃ ಕಂಬಳಕ್ಕೆ ಎಂಟ್ರಿ ಕೊಟ್ಟಿದ್ದರು.
ಕೃಷಿ ಮನೆತನದ ಹಿನ್ನಲೆಯ ಡಾ.ಭರತ್ ಶೆಟ್ಟಿ ಅವರಿಗೆ ಕಂಬಳ ಹೊಸತೇನಲ್ಲ. ಗೋಪ್ರೇಮಿಯಾಗಿರುವ ಶಾಸಕರು ಮಂಗಳೂರು ಕಂಬಳದಲ್ಲಿ ತಮ್ಮ ಎರಡು ಜೊತೆ ಕೋಣಗಳೊಂದಿಗೆ ಭಾಗವಹಿಸಿದರು. ಕಂಬಲ ಪ್ರೇಮಿಗಳ ನೆಚ್ಚಿನ ಹೆಸರು ಅಶ್ವಥಪುರ ಶ್ರೀನಿವಾಸ ಗೌಡರು ಕೋಣಗಳನ್ನು ಓಡಿಸುತ್ತಿದ್ದಾಗ ಜನ ಮೂಕವಿಸ್ಮಿತರಾಗಿ ವೀಕ್ಷಿಸುತ್ತಿದ್ದರು.
ಅಂತಿಮವಾಗಿ ಹಗ್ಗ ಹಿರಿಯದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಗೆಲುವನ್ನು ಕೋಣಗಳು ನಿಶ್ಚಿತಗೊಳಿಸಿವೆ. ಈ ವಿಜಯಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಶಾಸಕ ಡಾ.ಭರತ್ ಶೆಟ್ಟಿ ಅವರು ಧನ್ಯವಾದ ಅರ್ಪಿಸಿದರು.
Kshetra Samachara
27/03/2022 07:14 pm