ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಿದ್ದರಾಮಯ್ಯಗೆ ಸ್ವಾಮಿಜಿಗಳ ಬಗ್ಗೆ ಗೌರವ

ಮಂಗಳೂರು: ಸ್ವಾಮಿಜಿಗಳ ಕುರಿತು ಕುಚೋದ್ಯತನದ ಮಾತುಗಳನ್ನಾಡಿದ ಮಾಜಿ ಸಿ.ಎಂ ಸಿದ್ದರಾಮಯ್ಯನವರ ಪರ ವಿಧಾನಸಭಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಬ್ಯಾಟ್ ಬೀಸಿದ್ದಾರೆ.

ಸ್ವಾಮೀಜಿಗಳ ಬಗ್ಗೆ ಸಿದ್ದರಾಮಯ್ಯನವರಿಗೆ ಅಪಾರ ಗೌರವಿದೆ. ಎಲ್ಲಾ ಸ್ವಾಮೀಜಿಗಳಿಗೂ ಆತ್ಮೀಯರಾಗಿದ್ದಾರೆ. ಅವರು ಸಿ.ಎಂ ಆಗಿದ್ದಾಗ ಯಾವುದಾದರೂ ಒಬ್ಬನೇ ಒಬ್ಬ ಸ್ವಾಮೀಜಿ ಪ್ರತಿಭಟನೆ ಮಾಡಿಯರಲಿಲ್ಲ.‌ ಮೂಢನಂಬಿಕೆಗಳ ವಿರುದ್ಧದ ಬಿಲ್ ಪಾಸ್ ಮಾಡುವ ಸಂದರ್ಭ ಸ್ವಾಮೀಜಿಗಳ ವಿನಂತಿಯ ಮೇರೆಗೆ ಆ ಬಿಲ್ ಅನ್ನು ತಕ್ಷಣ ಕೈಬಿಟ್ಟರು ಎಂದು ಅವರನ್ನು ಸಮರ್ಥಿಸಿಕೊಂಡರು.

ಸಿದ್ದರಾಮಯ್ಯರ ಹೇಳಿಕೆಗಳನ್ನು ತಿರುಚಿ ಹೇಳುವ ಮೂಲಕ ಜನರ ಮಧ್ಯೆ ಗೊಂದಲ ಸೃಷ್ಟಿಸುವ ಕಾರ್ಯವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ, ಗ್ಯಾಸ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದನ್ನೆಲ್ಲಾ ಜನರ ಮನಸ್ಸಿನಿಂದ ದೂರ ಮಾಡಲು ಈ ರೀತಿಯ ವಿಚಾರಗಳನ್ನು ತಂದು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

Edited By : Shivu K
Kshetra Samachara

Kshetra Samachara

27/03/2022 04:36 pm

Cinque Terre

13.77 K

Cinque Terre

2

ಸಂಬಂಧಿತ ಸುದ್ದಿ