ಉಡುಪಿ: ವಿದ್ಯಾರ್ಥಿಗಳಿಗೆ ನೈತಿಕ ವಿದ್ಯೆ ಕಲಿಸುವುದಾದರೆ ಕಲಿಸಿ. ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನಾದರೂ ಕಲಿಸಿ. ಆದರೆ ಯಾವುದೇ ತಾರತಮ್ಯ ಮಾಡಲು ಹೋಗಬೇಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ಅವರು, ಬಿಜೆಪಿಯವರಿಗೆ ಚುನಾವಣೆಗೆ ಹೋಗಲು ಬೇರೆ ಬೇರೆ ಇಶ್ಯೂಗಳಿವೆ. ಮೂರು ವರ್ಷದ ಸಾಧನೆಯನ್ನು ಇವರು ಚುನಾವಣೆಯ ವಿಷಯ ಮಾಡಲಿ. ಭಾವನಾತ್ಮಕ ವಿಚಾರಗಳನ್ನು ಚುನಾವಣೆಗೆ ತರಬೇಡಿ ಎಂದು
ಎಂದರು.
ಇದೇ ವೇಳೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರೇ ಕಾಂಗ್ರೆಸ್ ಪಕ್ಷವನ್ನು ಮುಗಿಸುತ್ತಾರೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮೊದಲು ಆಯಮ್ಮ ಬಿಜೆಪಿಯನ್ನು ಮುಗಿಸದಿದ್ದರೆ ಸಾಕು ಎಂದು ತಿರುಗೇಟು ನೀಡಿದರು.
PublicNext
19/03/2022 06:44 pm