ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟು ಸರ್ವಧರ್ಮಕ್ಕೆ ಬೆಲೆ ಕೊಡುವವರು: ಮಾಜಿ ಸಿಎಂ ಸಿದ್ದರಾಮಯ್ಯ

ಮಂಗಳೂರು: ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟುಕೊಂಡವರು. ಸರ್ವಧರ್ಮಕ್ಕೆ ಬೆಲೆ ಕೊಡುವವರು ಕಾಶ್ಮೀರದಲ್ಲಿ ಏನು ನಡೆದಿದೆ. ಆ ಕಾಲದಲ್ಲಿ ಪಂಡಿತರ ಜೊತೆ ಏನೆಲ್ಲ ನಡೆಯಿತು. ಇದೆಲ್ಲದರ ಮಾಹಿತಿಯನ್ನು ಕೊಡಬೇಕಿತ್ತು. ಆವಾಗ ಅಲ್ಲಿ ಯಾರ ಸರ್ಕಾರ ಇತ್ತು, ಅವರು ಏನು ಮಾಡಿದ್ರು.? ಇದೆಲ್ಲಾ ಹೇಳಬೇಕು ಅಲ್ವಾ..? ಎಂದು ಮಾಜಿ ಸಿಎಂ ಸಿದ್ದರಾಮಯಯ್ ಪ್ರಶ್ನೆ ಮಾಡಿದ್ದಾರೆ.

ಕಾಶ್ಮೀರ್ ಫೈಲ್ಸ್ ಸಿನಿಮಾದ ಕುರಿತು ಮಂಗಳೂರಿನ ಬಜ್ಪೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಗುಜರಾತ್‌ನಲ್ಲಿ ನಡೆದಿದ್ದನ್ನು ಕೂಡ ಜನರಿಗೆ ತೋರಿಸುವ ಕೆಲಸ ಆಗಬೇಕು ಅಂದರು. ಇನ್ನು ನೀವು ಸಿನಿಮಾ ನೋಡಿಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಲ್ಲ. ಅದ್ಯಾಕೆ ನಾನು ಬಹಳಷ್ಟು ಸಿನಿಮಾ ನೋಡಿಲ್ಲ. ಇನ್ನು ಸಿನಿಮಾ ನೋಡಲೇಬೇಕು ಅಂತ ಎಲ್ಲಿದೆ? ಎಂದು ಪ್ರಶ್ನೆ ಎಸೆದರು. ಇನ್ನು ನಾವು ಸಾಫ್ಟ್ ಹಿಂದುತ್ವನೂ ಇಲ್ಲ, ಹಾರ್ಡ್ ಹಿಂದುತ್ವನೂ ಇಲ್ಲ. ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟುಕೊಂಡವರು. ಸರ್ವಧರ್ಮಕ್ಕೆ ಬೆಲೆ ಕೊಡುವವರು ಎಂದರು.

Edited By : Manjunath H D
PublicNext

PublicNext

19/03/2022 01:38 pm

Cinque Terre

40.65 K

Cinque Terre

28

ಸಂಬಂಧಿತ ಸುದ್ದಿ