ವಿಟ್ಲ: ಹಿಜಾಬ್ ಧರಿಸುವುದು ಇಸ್ಲಾಮ್ ಧರ್ಮದಲ್ಲಿ ಅಗತ್ಯ ಧಾರ್ಮಿಕ ಆಚರಣೆಗಳ ಭಾಗವಲ್ಲ' ಎಂಬ ಹೈಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ಇಮಾರತ್ ಎ ಶರೀಅ ನೀಡಿರುವ ಕರ್ನಾಟಕ ಬಂದ್ ಕರೆಗೆ ವಿಟ್ಲದಲ್ಲಿ ಎಲ್ಲಾ ಮುಸ್ಲಿಂ ವರ್ತಕರು ಬೆಂಬಲ ಸೂಚಿಸಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದಾರೆ.
ಇಮಾರತ್ ಎ ಶರೀಅ ಕರ್ನಾಟಕ ಬಂದ್ ಗೆ ಕರೆ ನೀಡಿರುವುದನ್ನು ವಿಟ್ಲ ಮುಸ್ಲಿಂ ಒಕ್ಕೂಟ ಬೆಂಬಲ ಸೂಚಿಸಿ ವಿಟ್ಲ ಸುತ್ತಮುತ್ತಲಿನ ವರ್ತಕರಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ಮನವಿ ಮಾಡಿದ್ದರು. ಅದರಂತೆ ಎಲ್ಲ ಮುಸ್ಲಿಂ ವರ್ತಕರು ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಮಸೀದಿ ಅಧೀನದಲ್ಲಿರುವ ಮದರಸಗಳಿಗೆ ರಜೆ ನೀಡಲಾಗಿದೆ. ಮುಸ್ಲಿಂ ವ್ಯಕ್ತಿಗಳು ಕೂಡಾ ಪೇಟೆಗೆ ಕಾಲಿಡಲಿಲ್ಲ. ಇನ್ನೂ ಕೆಲವರು ಮಕ್ಕಳನ್ನು ಶಾಲೆಗೆ ಕೂಡ ಕಳಿಸದೇ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.
Kshetra Samachara
17/03/2022 03:04 pm