ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 100 ಮಂದಿ 'ಕೈ' ಕಾರ್ಯಕರ್ತರೊಂದಿಗೆ ಬಿಜೆಪಿ ಸೇರ್ಪಡೆಗೊಳ್ಳುವ ನಿರ್ಧಾರಗೈದ ಖಾದರ್ ಆಪ್ತ

ಮಂಗಳೂರು: ಮಾಜಿ ಸಚಿವ ಯು.ಟಿ.ಖಾದರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಮಾಜಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ನೂರು ಮಂದಿ ಕೈ ಕಾರ್ಯಕರ್ತರೊಂದಿಗೆ ಬಿಜೆಪಿಗೆ ಸೇರ್ಪಡೆಗೊಳ್ಳುವೆ ಎಂದು ಘೋಷಣೆ ಮಾಡಿದ್ದಾರೆ.

ನಗರದ ಪ್ರೆಸ್ ಕ್ಲಬ್‌ನಲ್ಲಿಂದು ಮಾತನಾಡಿದ ಅವರು, ಯು.ಟಿ.ಖಾದರ್ ಅತ್ಯಂತ ಭ್ರಷ್ಟ ರಾಜಕಾರಣಿ. ಅವರ ನಡವಳಿಕೆಯಿಂದ ನಾವು ಬೇಸತ್ತಿದ್ದೇವೆ. ಇದೇ ಕಾರಣದಿಂದ ನಾವು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಳ್ಳಾಲ(ಮಂಗಳೂರು) ಕ್ಷೇತ್ರದಲ್ಲಿ ಅಭಿವೃದ್ಧಿಯೇ ಆಗಿಲ್ಲ. ಅಲ್ಪ ಸ್ವಲ್ಪ ಅನುದಾನದ ಕಾಮಗಾರಿ ಮಾಡಿ ಫೋಸ್ ನೀಡಲಾಗುತ್ತಿದೆ.‌ ಖಾದರ್ ಅವರಿಗೆ ದೇಶದಾದ್ಯಂತ ಮನೆಯಿದೆ. ಆದರೆ ಬಡವರಿಗೆ ಮನೆಯಿಲ್ಲ. ಅಬ್ಬಕ್ಕ ನಾಡು ಎಂದು ಹೇಳುವ ಇವರು ಉಳ್ಳಾಲದಲ್ಲಿ ಒಂದೇ ಒಂದುಬಮಹಿಳಾ ಕಾಲೇಜು ಮಾಡಿಲ್ಲ. ಮದುವೆ ಮುಂಜಿ, ಮಕ್ಕಳ ತೊಟ್ಟಿಲು ಹಾಕುವ ಕಾರ್ಯದಲ್ಲಿ ಭಾಗಿಯಾಗುತ್ತಾರೆಂದು ಖಾದರ್ ವಿರುದ್ಧ ಸಂತೋಷ್ ಶೆಟ್ಟಿ ಅಸಮಾಧಾನ ಹೊರ ಹಾಕಿದ್ದಾರೆ.

Edited By : Manjunath H D
PublicNext

PublicNext

12/03/2022 09:10 pm

Cinque Terre

65.43 K

Cinque Terre

20

ಸಂಬಂಧಿತ ಸುದ್ದಿ