ಕುಂದಾಪುರ: ಸ್ನೇಹಿತರ ಜೊತೆ ಮೀನು ಹಿಡಿಯಲು ಹೋದ ಯುವಕನೊಬ್ಬ ನೀರುಪಾಲಾದ ಘಟನೆ ಬೈಂದೂರು ತಾಲೂಕಿನ ಸೋಮೇಶ್ವರ ಬಳಿ ಸಂಜೆ ನಡೆದಿದೆ.
ಮೃತ ಯುವಕನನ್ನು ಬೈಂದೂರು ಬಿಜೂರು ಸಮೀಪದ ಬವಳಾಡಿ ನಿವಾಸಿ ಶಶಿಧರ್ ದೇವಾಡಿಗ(23) ಎಂದು ಗುರುತಿಸಲಾಗಿದೆ. ಈತ ಸ್ನೇಹಿತರ ಜೊತೆ ಮೀನು ಹಿಡಿಯುವ ಸಲುವಾಗಿ ಗಾಳ ಹಾಕಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನೀರು ಪಾಲಾದ ಶಶಿಧರ್ ರಕ್ಷಣೆಗೆ ಮೀನುಗಾರರು ಮುಂದಾದರೂ ಕೂಡ ಅವರನ್ನು ಬಚಾವ್ ಮಾಡಲು ಸಾಧ್ಯವಾಗಲಿಲ್ಲ. ಘಟನಾ ಸ್ಥಳಕ್ಕೆ ಬೈಂದೂರು ಸಿ.ಪಿ.ಐ ಸಂತೋಷ್ ಕಾಯ್ಕಿಣಿ ಹಾಗೂ ಠಾಣೆಯವರು ಭೇಟಿ ನೀಡಿದ್ದಾರೆ.
Kshetra Samachara
07/03/2022 12:46 pm