ಬೈಂದೂರು: ಕುಂದಾಪುರ ತಾಲೂಕಿನ ಸೌಕೂರು ರಥೋತ್ಸವಕ್ಕಾಗಿ ಬ್ಯಾನರ್ ಅಳವಡಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಫ್ಲೆಕ್ಸ್ ವಿದ್ಯುತ್ ತಂತಿಗೆ ತಗುಲಿ ಸೌಕೂರು ನಿವಾಸಿ ಪ್ರಶಾಂತ್ ದೇವಾಡಿಗ ಮೃತಪಟ್ಟಿದ್ದರು.ಮೃತ ಯುವಕನ ಕುಟುಂಬಕ್ಕೆ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ವೈಯಕ್ತಿಕವಾಗಿ 1 ಲಕ್ಷ ರೂ. ಆರ್ಥಿಕ ಸಹಾಯ ನೀಡಿದರು.
ಮೃತ ಯುವಕನ ಮನೆಗೆ ತೆರಳಿದ ಬಿ.ಎಂ ಸುಕುಮಾರ ಶೆಟ್ಟಿ ಪೋಷಕರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ವಿದ್ಯುತ್ ಶಾಕ್ ನಿಂದ ಮೃತಪಟ್ಟ ಯುವಕ ಬಡತನದ ಕುಟುಂಬದಿಂದ ಬಂದಿದ್ದು ಮನೆಯ ಜವಬ್ದಾರಿ ಹೊತ್ತಿದ್ದರು. ಆತನನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಮೃತ ಪ್ರಶಾಂತ್ ದೇವಾಡಿಗ ಬಿ.ಬಿ. ಹೆಗ್ಡೆ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು ಉತ್ತಮ ಗುಣನಡತೆ ಹೊಂದಿದ್ದ. ವೈಯಕ್ತಿಕವಾಗಿ ಆತನ ಕುಟುಂಬಕ್ಕೆ 1 ಲಕ್ಷ ನೆರವು ನೀಡಿದ್ದು ಕಾಲೇಜಿನಿಂದಲೂ ನೆರವು ನೀಡುವ ಬಗ್ಗೆ ಪ್ರಾಂಶುಪಾಲರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಗಾಯಾಳು ಕುಟುಂಬಸ್ಥರನ್ನು ಭೇಟಿಯಾಗಿ ಧೈರ್ಯ ತುಂಬಿದರು.
Kshetra Samachara
04/03/2022 02:47 pm