ಮುಲ್ಕಿ: ಮುಲ್ಕಿ ಕಾರ್ನಾಡ್ ಸಮುದಾಯ ಆರೋಗ್ಯ ಕೇಂದ್ರ ಅಭಿವೃದ್ಧಿಪಥದತ್ತ ಮುಂದುವರಿಯುತ್ತಿದ್ದು, ಎಂಆರ್‌ಪಿಎಲ್‌ನ ಕೋಟಿ ಅನುದಾನದಲ್ಲಿ ನೂತನ ಹೊರರೋಗಿಗಳ ಕೇಂದ್ರದ ಕಟ್ಟಡ ನಿರ್ಮಾಣವಾಗಿದೆ.
ಈ ನಡುವೆ ಕಟ್ಟಡಕ್ಕೆ ಸಂಪರ್ಕ ಕಲ್ಪಿಸಲು ನೂತನ ಕಾಂಕ್ರೀಟ್ ರಸ್ತೆ ಕಾಮಗಾರಿ ವ್ಯವಸ್ಥಿತವಾಗಿ ನಡೆದಿದ್ದರೂ ಏರು ರಸ್ತೆಯಿಂದ ಆಸ್ಪತ್ರೆಗೆ ನಡೆದುಕೊಂಡು ಬರುವ ರೋಗಿಗಳಿಗೆ, ವಾಹನ ಚಾಲಕರಿಗೆ, ಪ್ರಯಾಣ ದುಸ್ತರವಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಆಸ್ಪತ್ರೆಯ ಒಳ ಬಾಗದಲ್ಲಿ ಕಟ್ಟಡಕ್ಕೆ ತಾಗಿಕೊಂಡು ಅಪಾಯಕಾರಿ ಭಾರಿ ಗಾತ್ರದ ಮರ ಹಾಗೂ ಹಳೆ ಕಾಲದ ಅಂಬುಲೆನ್ಸ್ ತುಕ್ಕು ಹಿಡಿಯುತ್ತಿದ್ದು ಕೂಡಲೇ ತೆರವುಗೊಳಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ಗೇಟ್ ನಿರ್ಮಾಣ ಕಾರ್ಯ ನಡೆದಿದ್ದು ಗೇಟ್ ಬದಿಯಲ್ಲಿರುವ ಅಪಾಯಕಾರಿ ಟ್ರಾನ್ಸ್ಫಾರ್ಮರ್ ಈಗಲೇ ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮುಲ್ಕಿ-ಮೂಡಬಿದ್ರೆ ರಾಜ್ಯ ಹೆದ್ದಾರಿ ಕಾರ್ನಾಡು ರಸ್ತೆ ಆಸ್ಪತ್ರೆ ಬಳಿ ಸದಾ ವಾಹನ ಸಂಚಾರ ವಿದ್ದು ರಸ್ತೆ ಅಗಲೀಕರಣದ ಜೊತೆಗೆ ಆಸ್ಪತ್ರೆಗೆ ಸೂಕ್ತ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
03/03/2022 09:18 pm