ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಮತಾಂತರ ನಿಷೇಧ ಕಾಯ್ದೆ ವಿರುದ್ಧ ಕ್ರೈಸ್ತ ಸಂಘಟನೆಗಳ ಮೌನ ಪ್ರತಿಭಟನೆ

ಮುಲ್ಕಿ: ಕರ್ನಾಟಕ ಸರಕಾರ ಮತಾಂತರ ನಿಷೇದ ಕಾಯ್ದೆ ನಿಷೇಧದ ವಿರುದ್ಧ ಕಿನ್ನಿಗೋಳಿ ವಲಯದ ಏಳು ಚರ್ಚ್‌ಗಳ ಕ್ರೈಸ್ತ ಬಾಂದವರು ಕ್ಯಾಂಡಲ್ ಉರಿಸಿ ಮಾನವ ಸರಪಣಿಯೊಂದಿಗೆ ಮೌನ ಪ್ರತಿಭಟನೆ ನಡೆಸಿದರು.

ಕಿನ್ನಿಗೋಳಿ ರಾಜಾಂಗಣದಿಂದ ಮೂರುಕಾವೇರಿತನಕ ಕಿನ್ನಿಗೋಳಿ, ಪಕ್ಷಿಕೆರೆ, ದಾಮಸ್ಕಟ್ಟೆ, ಬಳ್ಕುಂಜೆ, ಕಟೀಲು, ನಿಡ್ದೋಡಿ, ನೀರುಡೆ ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಾಂದವರು ಮಾನವ ಸರಪಣಿಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ಪಾ. ಒಸ್ವಲ್ಡ್ ಮೋಂತೆರೋ, ಕಿನ್ನಿಗೋಳಿ ಚರ್ಚ್ ಜನರಲ್ ವಿಗಾರ್, ವಲಯ ಕಾರ್ಯದರ್ಶಿ ವಿಲಿಯಂ ಡಿಸೋಜ, ಕೆಥೋಲಿಕ್ ಸಭಾದ ಅಧ್ಯಕ್ಷೆ ಶರ್ಮಿಳಾ ಸೆರಾವೂ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

03/03/2022 10:25 am

Cinque Terre

4.42 K

Cinque Terre

3