ಮೂಡುಬಿದಿರೆ: ಚರ್ಚ್ ಪಾಲನಾ ಪರಿಷದ್, ಮೂಡುಬಿದಿರೆ ವಲಯ ಕಥೋಲಿಕ್ ಸಭಾ, ಮೂಡುಬಿದಿರೆ ವಲಯ ಸಮಿತಿ ವತಿಯಿಂದ ಕರ್ನಾಟಕ ಸರ್ಕಾರದ ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಪ್ರತಿಭಟನೆ ತಾಲೂಕು ಕಚೇರಿ ಬಳಿ ಬುಧವಾರ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ, ಸರ್ವ ಧರ್ಮೀಯರೂ ಸೇರಿ ಬ್ರಿಟಿಷರನ್ನು ಹಿಮ್ಮೆಟಿಸಿದರೇ ಹೊರತು ಕ್ರೈಸ್ತರು ಬ್ರಿಟಿಷರನ್ನು ಅವ ನನ್ನ ಪಂಥ ಎಂದು ಹೇಳಿಕೊಳ್ಳಲಿಲ್ಲ. ಭಾರತದ ಸಕಲ ಜನಸಮೂಹ ಸೇರಿ ಭಾರತೀಯರಾಗಿದ್ದೇವೆ. ಕ್ರೈಸ್ತ ಪಂಥವು ಮತಾಂತರ ಮಾಡಿದ್ದರೆ ಶಾಲಾ ಕಾಲೇಜುಗಳು ಮಾತ್ರವಲ್ಲ ಆಸ್ಪತ್ರೆಯ ರೋಗಿಗಳೂ ಮತಾಂತರಗೊಳ್ಳಬೇಕಿತ್ತು. ಆ ರೀತಿ ಎಂದೂ ಆಗಲಿಲ್ಲ. ಮತಾಂತರ ಅನ್ನುವ ಕಾಯಿದೆಯು ಮನುಷ್ಯ ವಿರೋಧಿ ಕಾಯಿದೆ ಅನ್ನೋ ಕಾರಣಕ್ಕೆ ಈ ಪ್ರತಿಭಟನೆಗೆ ಜೊತೆಯಾಗಿದ್ದೇವೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರದ ಪುಟ್ಟರಾಜು ಅವರಿಗೆ ಮನವಿ ಸಲ್ಲಿಸಲಾಯಿತು. ಉಡುಪಿ ಪ್ರಾಂತ್ಯ ಧರ್ಮಗುರು ಫಾ| ಚೇತನ್ ಲೋಬೋ, ಕ್ರೈಸ್ತ ಫೆಡರೇಶನ್ ಅಧ್ಯಕ್ಷ ಪ್ರಶಾಂತ್ ಜತ್ತನ, ಕಥೊಲಿಕ್ ಸಭಾ ವಲಯದ ಅಧ್ಯಕ್ಷ ಮನೋಹರ್ ಕುಟಿನ್ಜಾ, ಮೂಡುಬಿದಿರೆ ವಲಯ ಚರ್ಚ್ ಧರ್ಮಗುರುಗಳು, ಕಥೋಲಿಕ್ ಸಭಾ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
03/03/2022 09:42 am