ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಸೇತುವೆ ಸಹಿತ ಕಿಂಡಿ ಆಣೆಕಟ್ಟಿಗೆ ಶಿಲಾನ್ಯಾಸ

ಮೂಡುಬಿದಿರೆ: ಬುಧವಾರ ಕ್ಷೇತ್ರವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಸಂಪರ್ಕ ಸೇತುವೆ ಸಹಿತ ಕಿಂಡಿ ಅಣೆಕಟ್ಟಿಗೆ ಶಿಲಾನ್ಯಾಸವನ್ನು ಬುಧವಾರದಂದು ನೆರವೇರಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಉಮಾನಾಥ್ ಕೋಟ್ಯಾನ್, ಕೃಷಿಕರ ಬದುಕು ಹಸನಾಗಿಸುವುದು ಹಾಗೂ ಕೃಷಿಭೂಮಿಗೆ ಬೇಕಾದ ನೀರಾವರಿ ಸೌಲಭ್ಯ ಒದಗಿಸಿ ಅವರನ್ನು ಸಶಕ್ತರನ್ನಾಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಈ ಕಾರಣಕ್ಕಾಗಿಯೇ ಜನಪರವಾದ ಯೋಜನೆಗಳಿಗೆ ಆದ್ಯತೆ ನೀಡಿ ಶಾಶ್ವತ ಕಾಮಗಾರಿಗಳನ್ನು ರೂಪಿಸಲಾಗುತ್ತಿದೆ ಎಂದರು.

ಪಶ್ಚಿಮ ವಾಹಿನಿ ಯೋಜನೆ ಅನ್ವಯ ಒಟ್ಟು 34.23ಕೋಟಿ ಮೊತ್ತದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ 23 ಕಿಂಡಿ ಅಣೆಕಟ್ಟುಗಳನ್ನು ಸ್ಥಾಪಿಸಲು ಆದ್ದೇಶಿಸಿದ್ದು ಈ ಪೈಕಿ 10.18ಕೋಟಿ ವೆಚ್ಚದಲ್ಲಿ ನಾಲ್ಕು ಕಡೆಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದರು. ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುವುದಿಲ್ಲ. ಕ್ಷೇತ್ರವ್ಯಾಪ್ತಿಯಲ್ಲಿ ಕೃಷಿಕರಿಗೆ ಊರವರಿಗೆ ಸಹಕಾರವಾಗಬೇಕೆಂಬ ಹಿನ್ನಲೆಯಲ್ಲಿ ಹೆಚ್ಚುವರಿ 25ಕೋಟಿ ಅನುದಾನವನ್ನು ವಿಶೇಷವಾಗಿ ಅಪೇಕ್ಷಿಸಲಾಗಿದ್ದು , ಮುಖ್ಯಮಂತ್ರಿಗಳಿಂದ ಪೂರಕ ಸ್ಪಂದನೆ ದೊರಕಿದೆ ಎಂದು ತಿಳಿಸಿದರು.

ಶಿಲಾನ್ಯಾಸ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಿಪ್ಪಾಡಿ ಎಂಬಲ್ಲಿ 4.23ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ, ಇದೇ ಪಂಚಾಯತ್ ವ್ಯಾಪ್ತಿಯ ಅರ್ತಿಗುಂಡಿ ಎಂಬಲ್ಲಿ 2.25 ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ, ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಮಾರು ಪ್ರದೇಶದಲ್ಲಿ 1.71 ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ, ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಕೊಳಟಿಕಟ್ಟ ಎಂಬಲ್ಲಿ 1.89ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಸ್ಥಳೀಯ ಜನಪ್ರತಿನಿಧಿಗಳು, ಊರ ಪ್ರಮುಖರ ಸಮ್ಮುಖದಲ್ಲಿ ಶಿಲಾನ್ಯಾಸ ನೆರವೇರಿಸಿದರು.

ಚೌಟರ ಅರಮನೆಯ ಕುಲದೀಪ್ ಎಂ, ಡಾ.ಪದ್ಮನಾಭ ಉಡುಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಚರಿತ ಶೆಟ್ಟಿ,ಪುತ್ತಿಗೆ ಪಂಚಾಯತ್ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿತಾ ಜೆ ಸಾಲ್ಯಾನ್, ವೇ.ಮೂ. ಅನಂತಕೃಷ್ಣ ಭಟ್, ಪ್ರದೀಪ್ ಶೆಟ್ಟಿ, ಅಶೋಕ್ ಕೋಡಿಪ್ಪಾಡಿ, ರಾಮಮೂರ್ತಿ ಉಡುಪ ಮುಂತಾದವರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

03/03/2022 07:36 am

Cinque Terre

9.69 K

Cinque Terre

0

ಸಂಬಂಧಿತ ಸುದ್ದಿ