ಬಂಟ್ವಾಳ: ಕಾಂಗ್ರೆಸ್ ಪಕ್ಷ ತನ್ನ ಚಟುವಟಿಕೆಗಳಿಂದ ಜನರ ದಾರಿ ತಪ್ಪಿಸುತ್ತಿದೆ ಎಂದು ಆಪಾದಿಸಿ ಬಂಟ್ವಾಳದಲ್ಲಿ ಬಿಜೆಪಿಯ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನಾ ಸಭೆ ಶನಿವಾರ ನಡೆದಿದೆ.
ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಈಶ್ವರಪ್ಪ ಕುರಿತು ಮಾತನಾಡಲು ಕಾಂಗ್ರೆಸ್ ಗೆ ಹಕ್ಕಿಲ್ಲ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಹೊರಟ ಬಿಜೆಪಿಯವರಿಗೆ ಗುಂಡು ಹಾರಿಸಿದ್ದನ್ನು ನೆನಪಿಸಿಕೊಳ್ಳಿ ಎಂದಿದ್ದಾರೆ.
ಬಿಜೆಪಿಯ ಪೂರ್ವನಾಯಕರಾದ ಶ್ಯಾಮಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ ಹೇಗೆ ಮೃತಪಟ್ಟರು ಎಂಬ ಕುರಿತು ಇಂದಿಗೂ ಸತ್ಯ ಬಯಲಾಗಿಲ್ಲ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಹೊರಟ ಬಿಜೆಪಿಯ ಆರು ಕಾರ್ಯಕರ್ತರನ್ನು ಗುಂಡು ಹಾರಿಸಿ ಕೊಂದಾಗ ರಾಷ್ಟ್ರಧ್ವಜದ ಚಿಂತೆ ಆಗ ಇರಲಿಲ್ಲವೇ ಎಂದು ಹರಿಕೃಷ್ಣ ಬಂಟ್ವಾಳ ಪ್ರಶ್ನಿಸಿದರು.
ಈಶ್ವರಪ್ಪ ಕುರಿತು ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದು ಹರಿಕೃಷ್ಣ ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪ್ರತಿಭಟನೆಯ ಉದ್ದೇಶ ಕುರಿತು ವಿವರಿಸಿದರು. ಪ್ರಮುಖರಾದ ದೇವಪ್ಪ ಪೂಜಾರಿ, ರಾಮದಾಸ ಬಂಟ್ವಾಳ ಮತ್ತಿತರರು ಈ ಸಂದರ್ಭ ಇದ್ದರು.
Kshetra Samachara
26/02/2022 08:02 pm