ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಕೋಮು ಹಿಂಸೆಗೆ ಸಚಿವ ಈಶ್ವರಪ್ಪ ಪ್ರಚೋದನೆ; ಎಸ್‌ ಡಿಪಿಐ

ಮೂಡುಬಿದಿರೆ: ಸಚಿವ ಕೆ.ಎಸ್.‌ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಎಸ್‌ಡಿಪಿಐ ವತಿಯಿಂದ ಮೂಡುಬಿದಿರೆಯಲ್ಲಿ ಇಂದು ಸಂಜೆ ಪ್ರತಿಭಟನೆ ಸಭೆ ನಡೆಯಿತು.

ಮೂಡುಬಿದಿರೆ ವಿಧಾನಸಭೆ ಕ್ಷೇತ್ರ ಎಸ್‌ಡಿಪಿಐ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ಮಾತನಾಡಿ, ಕೋಮು ಹಿಂಸೆಗೆ ಪ್ರಚೋದನೆ ನೀಡುತ್ತಿರುವ ಸಚಿವ ಈಶ್ವರಪ್ಪರಿಂದ ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಕೆಲವು ಮುಸ್ಲಿಂ ಗೂಂಡಾಗಳನ್ನು ಬಳಸಿಕೊಂಡು ಹರ್ಷನನ್ನು ಕೊಲೆ ಮಾಡಿಸಿದ್ದೀರಿ. ನಿಮ್ಮ ಫ್ಯಾಸಿಸ್ಟ್ ಸಿದ್ಧಾಂತ ಮುಂದುವರಿಸಲು ನಾವು ಬಿಡುವುದಿಲ್ಲ. ನಿಮ್ಮಂತಹ ದೇಶ ವಿರೋಧಿಗಳ ವಿರುದ್ಧ ಮುಂದಿನ ಚುನಾವಣೆಯಲ್ಲಿ ಹೋರಾಟ ನಡೆಸಿ ತಕ್ಕ ಪಾಠ ಕಲಿಸುತ್ತೇವೆ ಎಂದರು.

ಹಿಜಾಬ್ ಬಗ್ಗೆ ವಿಧಾನಸಭೆಯಲ್ಲಿ ಬಲವಾಗಿ ಧ್ವನಿ ಎತ್ತದ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಮತ್ತು ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ಅಂತಾಕ್ಷರಿ ಹಾಡಿ ಸಮಯ ಕಳೆಯುತ್ತಿದ್ದಾರೆ. ನಿಮ್ಮಂತವರು ಜನಪ್ರತಿನಿಧಿಯಾಗಲು ನಾಲಾಯಕ್. ಡಿಕೆಶಿ ಅವರು ಈಶ್ವರಪ್ಪ ಹೆಗಲಿಗೆ ಕೈಹಾಕಿ ಸುತ್ತಾಡುತ್ತಿದ್ದಾರೆ.

ಮುಸ್ಲಿಮರ ಬೆಂಬಲ ಇಲ್ಲದೆ ನಿಮಗೆ ಚುನಾವಣೆ ಗೆಲ್ಲಲು ಅಸಾಧ್ಯ ಎಂದು ಗೊತ್ತಿದ್ದೂ ಈ ರೀತಿ ಮಾಡುತ್ತಿದ್ದೀರಿ. ಮುಂದಿನ ಚುನಾವಣೆಯಲ್ಲಿ ನಿಮಗೆ ಎಸ್‌ಡಿಪಿಐ ದೊಡ್ಡ ತಡೆ ಒಡ್ಡಲಿದೆ ಎಂದು ಎಚ್ಚರಿಸಿದರು. ಮಂಗಳೂರು ಉತ್ತರ ಕ್ಷೇತ್ರ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಆಸಿಫ್ ತೋಡಾರು, ನಿಸಾರ್ ಮಾರೂರು ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

24/02/2022 12:41 pm

Cinque Terre

12.45 K

Cinque Terre

3

ಸಂಬಂಧಿತ ಸುದ್ದಿ