ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಗ್ರಾಮವಾಸ್ತವ್ಯಕ್ಕೆ ಆಗಮಿಸಿದ ಕಂದಾಯ ಸಚಿವರಿಗೆ ಎತ್ತಿನ ಗಾಡಿ ಮೆರವಣಿಗೆ

ಆರೂರು: ಉಡುಪಿ ಜಿಲ್ಲೆಯ ಆರೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕಾಗಿ ಇಂದು ಕಂದಾಯ ಸಚಿವ ಆರ್.ಅಶೋಕ್ ಜಿಲ್ಲೆಗಾಗಮಿಸಿದ್ದಾರೆ. ಸಚಿವರನ್ನು ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಎತ್ತಿನ ಗಾಡಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಹತ್ತಾರು ಜನಪದ ಕಲಾ ತಂಡಗಳು, ಕಂಬಳದ ಕೋಣಗಳು, ಬೆಳ್ಗೊಡೆ ಜನಪದ ಕಲಾತಂಡ, ಕೊಂಬು ಕಹಳೆ ಸಚಿವರ ಸ್ವಾಗತಕ್ಕೆ ಮೆರುಗು ನೀಡಿತು.ಶಾಸಕ ರಘುಪತಿ ಭಟ್, ಸಚಿವ ಸುನಿಲ್ ಕುಮಾರ್,ಉಸ್ತುವಾರಿ ಸಚಿವ ಎಸ್ ಅಂಗಾರ ಸಹಿತ ಜನಪ್ರತಿನಿಧಿಗಳು ,ಅಧಿಕಾರಿ ವರ್ಗ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

19/02/2022 06:13 pm

Cinque Terre

5.76 K

Cinque Terre

0

ಸಂಬಂಧಿತ ಸುದ್ದಿ