ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಎಸ್ ಡಿಪಿಐ ಯವರ ಸರ್ಟಿಫಿಕೇಟ್ ನ ಅಗತ್ಯ ನನಗಿಲ್ಲ: ಶಾಸಕರ ತಿರುಗೇಟು!

ಉಡುಪಿ: ಯಾರು ನನ್ನ ಕ್ಷೇತ್ರದ ಮತದಾರರಿದ್ದಾರೆ, ಮುಸ್ಲಿಂ ಮುಖಂಡರಿದ್ದಾರೆ ಅವರು ನನ್ನ ಬಗ್ಗೆ ಮಾತಾಡಲಿ.ಅದು ಬಿಟ್ಟು ಬೇರೆ ಊರಿನ ಎಸ್ ಡಿಪಿಐ ನಾಯಕರು ಇಲ್ಲಿಗೆ ಬಂದು ನನಗೆ ಸರ್ಟಿಫಿಕೇಟ್ ಕೊಡುವ ಅಗತ್ಯ ಇಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ತಿರುಗೇಟು ನೀಡಿದ್ದಾರೆ.

ನಿನ್ನೆ ಎಸ್ಡಿಪಿಐ ರಾಜ್ಯ ಮುಖಂಡರು ಶಾಸಕರ ವಿರುದ್ಧ ವಾಗ್ದಾಳಿ ನಡೆಸಿ ರಾಜೀನಾಮೆ ಕೇಳಿದ್ದರು.ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದ ರಘುಪತಿ ಭಟ್ ,ನನ್ನ ಕ್ಷೇತ್ರದ ಮುಸ್ಲಿಂ ಮುಖಂಡರು ,ಮುಸ್ಲಿಮರು ನನ್ನ ಜೊತೆ ಮಾತನಾಡಿದ್ದಾರೆ.ತಮ್ಮ ಸಂಶಯಗಳನ್ನು‌ ಹೇಳಿದ್ದಾರೆ.

ನಾನು ಯಾವ ಧರ್ಮದವರನ್ನೂ ದೂರಿಲ್ಲ.ಎಸ್ಡಿಪಿಐ ನವರ ವಿದ್ಯಾರ್ಥಿ ಸಂಘಟನೆಯೇ ಇದೆಲ್ಲ ವಿವಾದಕ್ಕೆ ನೇರ ಕಾರಣ.ಇದನ್ನು ಅವರೇ ಬಹಿರಂಗವಾಗಿ ಹೇಳಿದ್ದಾರೆ.ಹೀಗಾಗಿ ಅವರ ಸರ್ಟಿಫಿಕೇಟಾಗಲಿ ಪ್ರಶಂಸೆಯಾಗಲೀ ನನಗೆ ಅಗತ್ಯ ಇಲ್ಲ ಅಂತ ಶಾಸಕರು ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

18/02/2022 06:58 pm

Cinque Terre

16.35 K

Cinque Terre

4

ಸಂಬಂಧಿತ ಸುದ್ದಿ