ಮೂಡುಬಿದಿರೆ: ತಾಲೂಕಿನ ಪುತ್ತಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ನೀರಿನ ಅವಶ್ಯಕತೆ ಊರಿನ ಜನರಿಗೆ ಇದೆ. ಆದ್ದರಿಂದ ನಾವು ನೀರನ್ನು ಹಿಡಿದಿಟ್ಟು ಒಸರನ್ನು ಹೆಚ್ಚಿಸಬೇಕಾಗಿದೆ. ಕೃಷಿಕರಿಗೆ ತೊಂದರೆಯಾಗದಂತೆ ವ್ಯವಸ್ಥಿತ ರೀತಿಯ ಕಿಂಡಿ ಅಣೆಕಟ್ಟು ನಿರ್ಮಿಸುವುದಾದರೆ ನಮ್ಮ ಒಪ್ಪಿಗೆಯಿದೆ. ಅಲ್ಲದೆ ಮೊದಲು ಕೊಡ್ಯಡ್ಕ ರಸ್ತೆಯ ಕಡೆಯಿಂದಲೇ ಈ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿ ಆರಂಭಿಸಬೇಕು ಹಾಗೂ ನದಿಯಲ್ಲಿ ತುಂಬಿರುವ ಹೂಳನ್ನು ಮೇಲೆತ್ತಬೇಕೆಂದು ಒತ್ತಾಯಿಸಿದ್ದರು.
ಭಾನುವಾರದಂದು ಕೊಡಿಪಾಡಿ ಪರಿಸರ ಕೃಷಿಕರನ್ನು ಮತ್ತು ಅಣೆಕಟ್ಟಿಗೆ ವಿರೋಧ ವ್ಯಕ್ತಪಡಿಸಿದವರನ್ನು ಕರೆಸಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಅವರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸಲಾಗಿತ್ತು. ಇಲ್ಲಿನ ವ್ಯವಸ್ಥಿತ ರೀತಿಯಲ್ಲಿಯೇ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ. ಕೃಷಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿ ಕೃಷಿಕರು ಒಪ್ಪಿಗೆ ಸೂಚಿಸುವಂತೆ ಮನವೊಲಿಸುವ ಪ್ರಯತ್ನವನ್ನು ಮಾಡಿದರು.
ಕೃಷಿಕರಿಗೆ ತೊಂದರೆಯಾಗದಂತೆ ವ್ಯವಸ್ಥಿತ ರೀತಿಯ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಗ್ರಾಮಸ್ಥರ ಒಪ್ಪಿಗೆ ಪಡೆದಿದ್ದಾರೆ. ಮತ್ತು ಕೊಡ್ಯಡ್ಕದಿಂದ ರಸ್ತೆ ಕಾಮಗಾರಿ ಆರಂಭಿಸಿ, ನದಿಯ ಹೂಳೆತ್ತುವಂತೆ ಕೃಷಿಕರಿಂದ ಸಲಹೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಾರೆ ಏನೇ ಆಗಲಿ ರೈತರು ಎನಿಸಿದಂತೆ ಫಲಕಾರಿಯಾದರೆ ಅಷ್ಟೇ ಸಾಕು.
Kshetra Samachara
14/02/2022 06:57 pm