ಉಡುಪಿ: ಉಡುಪಿ ಶಾಸಕ ರಘುಪತಿ ಭಟ್, ಎಸ್ ಡಿಪಿಐ ಮತ್ತು ಕಾಂಗ್ರೆಸ್ ಪಕ್ಷಗಳು ಮುಸ್ಲಿಮರ ಮತಕ್ಕಾಗಿ ಪೈಪೋಟಿ ನಡೆಸುತ್ತಿವೆ.ಇದರ ಪರಿಣಾಮವಾಗಿ ಹಿಜಾಬ್ ವಿವಾದ ಹುಟ್ಟಿಕೊಂಡಿದೆ ಎಂಬ ಆರೋಪ ಮಾಡಿದ್ದರು.
ಈ ಆರೋಪವನ್ನು ಎಸ್‌ಡಿಪಿಐ ತಳ್ಳಿ ಹಾಕಿದೆ.ಇದೊಂದು ನಿರಾಧಾರ ಆರೋಪ ಎಂದು ಹೇಳಿರುವ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅತಾವುಲ್ಲಾ ಜೋಕಟ್ಟೆ ,ಎಸ್‌ಡಿಪಿಐ ಪಕ್ಷವನ್ನು ಮುಸ್ಲಿಮರು ಪ್ರಾರಂಭಿಸಿರಬಹುದು.
ಆದರೆ ಇದರಲ್ಲಿ ಕೆಳ ವರ್ಗದವರು ಅಲ್ಲಸಂಖ್ಯಾತರು, ಸಿಕ್ಝರು, ಜೈನರು ಎಲ್ಲ ಧರ್ಮದವರೂ ಇದ್ದಾರೆ. ಜಾತ್ಯತೀತ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಎಸ್‌ಡಿಪಿಐ ಕೆಲಸ ಮಾಡುತ್ತದೆ. ರಘುಪತಿ ಭಟ್ಟರ ಆರೋಪ ನಿರಾಧಾರವಾದದ್ದು.ಅವರು ತಮ್ಮ ಹೇಳಿಕೆಗೆ ಸಾಕ್ಷ್ಯಾಧಾರ ಒದಗಿಸಲಿ ಎಂದು ಸವಾಲು ಹಾಕಿದ್ದಾರೆ.
Kshetra Samachara
11/02/2022 02:17 pm