ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು : ಸಂವಿಧಾನ ನಾಶವಾದರೆ ಏನಾದೀತು-ಚಿಂತನೆ ಅಗತ್ಯ ಸಂವಿಧಾನ ಸಂರಕ್ಷಣಾ ಜಾಗೃತಿ ಜಾಥಾದಲ್ಲಿ ಬಿ.ಎಂ.ಭಟ್ ಹೇಳಿಕೆ

ಪುತ್ತೂರು : ಯಾವುದೇ ಧರ್ಮದ ಪರವಾಗಿಲ್ಲದೆ ಎಲ್ಲರಿಗೂ ಧಾರ್ಮಿಕ ಹಕ್ಕು ನೀಡಿರುವ, ಪರ ಧರ್ಮ ಸಂಹಿಷ್ಣುತೆ ಮತ್ತು ಧರ್ಮ ನಿರಾಪೇಕ್ಷತೆಯಿಂದ ಕೂಡಿದ ಅತ್ಯಂತ ಶ್ರೇಷ್ಠ ಸಂವಿಧಾನ ನಮ್ಮದು. ಸಂವಿಧಾನ ನಾಶವಾಗಲು, ಒಂದೊಂದಾಗಿ ತೂತು ಬಿಡಲು ಬಿಟ್ಟರೆ ಭವ್ಯ ಭಾರತ ಏನಾದೀತು ಎಂಬ ಬಗ್ಗೆ ನಾವೆಲ್ಲರೂ ಚಿಂತನೆ ಮಾಡಬೇಕಾಗಿದೆ ಎಂದು ಕನರ್ಾಟಕ ಖುಣಮುಕ್ತ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ವಕೀಲ ಬಿ.ಎಂ.ಭಟ್ ಅವರು ಹೇಳಿದರು.

ಪುತ್ತೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ವಠಾರದ ಗಾಂಧೀ ಕಟ್ಟೆಯ ಬಳಿ ಮಂಗಳವಾರ ನಡೆದ `ಸಂವಿಧಾನ ಸಂರಕ್ಷಣಾ ಜಾಗೃತಿ ಜಾಥಾ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಮಿಕ ವರ್ಗಕ್ಕೆ, ದುಡಿಯುವ ವರ್ಗಕ್ಕೆ ದುಡಿತಕ್ಕೆ ತಕ್ಕ ಪ್ರತಿಫಲ ನೀಡುವುದು ಕೂಡ ಸಮಾಜಿಕ ನ್ಯಾಯ ಚಿಂತನೆಯಲ್ಲಿ ಬರುತ್ತದೆ. ಸಾಮಾಜಿಕ ನ್ಯಾಯ ಮೊದಲು, ಆಮೇಲೆ ಆರ್ಥಿಕ ನ್ಯಾಯ, ನಂತರ ರಾಜಕೀಯ ನ್ಯಾಯ ಎಂದ ಅವರು ತುಳಿತಕ್ಕೊಳಗಾದವರು,ಶೋಚನೀಯ ಸ್ಥಿತಿಯಲ್ಲಿರುವವರು ಮೇಲೆ ಬರಬೇಕಾದರೆ ಸಾಮಾಜಿಕ ಸಮಾನತೆ ಇರಬೇಕು ಎಂಬ ಸಾಮಾಜಿಕ ಬದ್ಧತೆಯನ್ನು ಸಂವಿಧಾನ ನೀಡಿದೆ. ಇಂತಹ ವರ್ಗಕ್ಕೆ ಸಾಮಾಜಿಕ ನ್ಯಾಯ ಸಿಗುವ ತನಕವೂ ಮೀಸಲಾತಿ ಬೇಕಾಗಿದೆ ಎಂದು ಅವರು ಹೇಳಿದರು.

ದಲಿತ ಹಕ್ಕು ರಕ್ಷಣಾ ಸಮಿತಿಯ ಮುಖಂಡೆ ಈಶ್ವರಿ, ಕಾರ್ಮಿಕ ಸಂಘಟನೆಯ ಮುಖಂಡ ಎಲ್.ಮಂಜುನಾಥ,ಸಿಪಿಐಎಂ ಮುಖಂಡರಾದ ಡೊಂಬಯ್ಯ ಗೌಡ, ನೆಬಿಸಾ ಮತ್ತಿತರರು ಇದ್ದರು.

Edited By : Nagesh Gaonkar
Kshetra Samachara

Kshetra Samachara

08/02/2022 09:02 pm

Cinque Terre

11.35 K

Cinque Terre

0

ಸಂಬಂಧಿತ ಸುದ್ದಿ