ಪುತ್ತೂರು: ಹಿಜಾಬ್ ಹೆಸರಿನಲ್ಲಿ ರಾಜ್ಯದಲ್ಲಿ ನಡೆಯುತ್ತಿರುವುದು ರಾಜಕೀಯ ಡೊಂಬರಾಟ ಎಂದು ಮಹಿಳಾ ಪರ ಹೋರಾಟಗಾರ್ತಿ ಜೊಹರಾ ನಿಸಾರ್ ಹೇಳಿದ್ದಾರೆ.ಪುತ್ತೂರಿನಲ್ಲಿ ಫೆ. 8 ರಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹಿಜಾಬ್ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಯಾವುದೇ ರಾಜಕೀಯ ಪಕ್ಷದ ಮುಖಂಡರ ಮಕ್ಕಳಿಲ್ಲ. ಕೇವಲ ಮಧ್ಯಮ ವರ್ಗದ ಮಕ್ಕಳನ್ನು ಮುಂದಿಟ್ಟು ಈ ಹೋರಾಟ ನಡೆಸಲಾಗುತ್ತಿದ್ದು, ಮುಸ್ಲಿಂ ಮಕ್ಕಳ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಮನೆಯಲ್ಲೇ ಕೂರಿಸುವ ಷಡ್ಯಂತ್ರ ಇದರ ಹಿಂದಿದೆ ಎಂದು ಆರೋಪಿಸಿದರು. ಕೇವಲ ಹಿಜಾಬ್ ಗೋಸ್ಕರ ನಿಮ್ಮ ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟ ಬೇಡ ಎಂದು ಮಕ್ಕಳ ಪೋಷಕರಲ್ಲಿ ಮನವಿ ಮಾಡಿದ ಅವರು ಕಾಲೇಜಿನ ನಿಯಮ ಪಾಲನೆ ಮಾಡುವುದು ಅನಿವಾರ್ಯ ಎಂದರು.
ಕಾಲೇಜಿನಿಂದ ಹೊರಗೆ ಯಾರೂ ಹಿಜಾಬ್ ಹಾಕದಂತೆ ತಡೆಯುತ್ತಿಲ್ಲ ಎನ್ನುವ ವಿಚಾರವನ್ನೂ ಮಕ್ಕಳು ಮತ್ತು ಪೋಷಕರು ಅರಿತುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
PublicNext
08/02/2022 08:50 pm