ಮಂಗಳೂರು: ಸ್ಕಾರ್ಪ್ ವಿಚಾರದಿಂದ ಇಡೀ ದೇಶಕ್ಕೆ ಬಹಳ ಅವಮಾನ ಆಗಿದೆ. ಕರಾವಳಿ ಜಿಲ್ಲೆಗಳು ತನ್ನದೇ ಆದ ಇತಿಹಾಸ ಹೊಂದಿದೆ ಎಂದು ಮಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿ, ಕರಾವಳಿ ಜಿಲ್ಲೆಗಳು ಜ್ಞಾನದ ಭಂಡಾರ. ಇಲ್ಲಿನ ಸಂಪತ್ತು ಸರಿಯಾಗಿ ಬಳಸಿಕೊಳ್ಳದೆ ಇಂತಹ ಷಡ್ಯಂತ್ರ ರೂಪಿಸಲಾಗ್ತಿದೆ.
ಮಕ್ಕಳಲ್ಲಿ ಇಂತಹ ವಿಷ ಬಿತ್ತುವ ಕೆಲಸ ನಿರಂತರವಾಗಿದೆ. ಇದ್ದ ಸಂಪ್ರದಾಯವನ್ನು ಬದಲಿಸುವ ಷಡ್ಯಂತ್ರ ನಡೆಯುತ್ತಿದೆ.
ನಮ್ಮ ಸಂವಿಧಾನವೇ ನಮಗೆ ನಮ್ಮ ಧರ್ಮ. ಈ ವಿಚಾರ ಕೋರ್ಟ್ ನಲ್ಲಿದೆ, ಕೋರ್ಟ್ ತೀರ್ಪಿಗೆ ತಲೆ ಬಾಗುತ್ತೇವೆ. ರಾಹುಲ್ ಗಾಂಧಿಯವರು ಹಿಜಾಬ್ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಯಾರನ್ನೂ ಜಾತಿ- ಧರ್ಮದ ಆಧಾರದ ಮೇಲೆ ನೋಡಲು ಸಾಧ್ಯವಿಲ್ಲ. ಅವರವರ ಧರ್ಮ, ಪದ್ಧತಿ ಅನುಸರಿಸಲು ನಾವು ಅಡ್ಡಿಪಡಿಸೋಲ್ಲ. ಸಚಿವ ಸುನಿಲ್ ಕುಮಾರ್ ಹಿಜಾಬ್ ವಿಚಾರದಲ್ಲಿ ಮಾತನಾಡುವ ಮೊದಲು ತಾವು ಪ್ರಮಾಣ ವಚನ ಸ್ವೀಕರಿಸುವಾಗ ಹೇಳಿರುವ ಮಾತಿಗೆ ಬದ್ಧರಾಗಲಿ ಎಂದರು.
PublicNext
07/02/2022 07:41 pm