ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕಾಲೇಜು ಅಭಿವೃದ್ಧಿ ಸಮಿತಿ ಸಭೆ: ಸೋಮವಾರದಿಂದ ಸಮವಸ್ತ್ರ ಪಾಲನೆ ಕಡ್ಡಾಯ

ಕುಂದಾಪುರ: ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇವತ್ತು ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಇಂದು ನಡೆಯಿತು.ಸಭೆ ಬಳಿಕ ಮಾತನಾಡಿದ ಎಸ್ ಬಿ ಸಿ ಸದಸ್ಯ ಮೋಹನದಾಸ ಶೆಣೈ ,ಧಾರ್ಮಿಕತೆಗೆ ತರಗತಿಯೊಳಗೆ ಅವಕಾಶ ಇಲ್ಲ. ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ತರಗತಿಗೆ ಬರುವಂತಿಲ್ಲ.

ಶುಕ್ರವಾರ ಗೇಟು ಬಾಗಿಲಲ್ಲೇ ಕುಳಿತಿದ್ದ ವಿದ್ಯಾರ್ಥಿನಿಯರು ಸೋಮವಾರದಿಂದ ಕಾಲೇಜು ಗೇಟಿನೊಳಗೆ ಬರಲು ಅವಕಾಶವಿದೆ.

ಆದರೆ ಹಿಜಾಬ್ ಧರಿಸಿ ತಗಗತಿಗೆ ಬರುವಂತಿಲ್ಲ.ಕೇಸರಿ ಶಾಲಿನವರಿಗೂ ಗೇಟಿನೊಳಗೆ ಬರಲು ಅವಕಾಶವಿದೆ. ಆದರೆ ತರಗತಿಗೆ ಹೋಗುವುದಾದರೆ ಹಿಜಾಬ್ -ಕೇಸರಿ ಶಾಲನ್ನು ತೆಗೆದಿರಿಸಿ ಹೋಗಬೇಕು.ಅದಿಲ್ಲದಿದ್ದರೆ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

05/02/2022 07:50 pm

Cinque Terre

8.24 K

Cinque Terre

0

ಸಂಬಂಧಿತ ಸುದ್ದಿ