ಮಂಗಳೂರು: ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ದೇಶದ 75 ವರ್ಷಗಳಲ್ಲಿಯೇ ಕಂಡಂತಹ ಅತ್ಯಂತ ಕಳಪೆ ಬಜೆಟ್. ಇದೊಂದು ನಿಷ್ಪ್ರಯೋಜಕ ಬಜೆಟ್ ಆಗಿದೆ. ರಾಜ್ಯಗಳಿಗೂ ಯಾವುದೇ ಕೊಡುಗೆ ದೊರಕಿಲ್ಲ. ಇದರ ಉದ್ದೇಶ ರಾಜ್ಯಗಳು ಗುಲಾಮರಾಗಿ ಕೇಂದ್ರ ಸರಕಾರದೊಂದಿಗೆ ಯೋಜನೆ ಬೇಡಲಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಜೆಟ್ ನಿಂದ ಕೇಂದ್ರ ಸರಕಾರದ ಮತ್ತೊಂದು ಸರ್ವಾಧಿಕಾರಿ ಧೋರಣೆ ಬಯಲಾಗಿದೆ. ಇವರು ಕರ್ನಾಟಕಕ್ಕೆ ಸಂಪೂರ್ಣ ಮೋಸ ಮಾಡಿದ್ದು, ಮೇಕೆದಾಟು, ಕಳಸ ಬಂಡೂರಿ ಸಂಬಂಧಿಸಿ ಬಜೆಟ್ ನಲ್ಲಿ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ ಎಂದರು.
ಜನಸಾಮಾನ್ಯರಿಗೆ ಪ್ರಯೋಜನವಿಲ್ಲದ ಬಜೆಟ್ ಆಗಿದ್ದು, ತೆರಿಗೆ ಪಾವತಿದಾರರ ಬಗ್ಗೆ ಗಮನ ನೀಡಿಲ್ಲ. ಕ್ರಿಪ್ಟೊ ಕರೆನ್ಸಿಯನ್ನು ಲೀಗಲ್ ಮಾಡಿದ್ದು, ಈ ಮೂಲಕ ಈ ಬಜೆಟ್ ಬ್ಲಾಕನ್ನು ವೈಟ್ ಮಾಡುವ ಬಜೆಟ್ ಆದಂತೆ ಕಾಣುತ್ತದೆ. ಕೇಂದ್ರದ ಬಜೆಟ್ ಆತ್ಮ ನಿರ್ಭರ್ ಬಜೆಟ್ ಎಂದು ಹೇಳಲಾಗುತ್ತದೆ. ಆದರೆ, ಇದು ಆತ್ಮ ನಿರ್ಭರ್ ಅಲ್ಲ, ಆತ್ಮ ಬರ್ಬಾದ್ ಬಜೆಟ್ ಎಂದು ವ್ಯಂಗ್ಯವಾಡಿದರು.
Kshetra Samachara
03/02/2022 10:45 am