ಬೈಂದೂರು: ತಮ್ಮ ವಿಧಾನಸಭೆ ವ್ಯಾಪ್ತಿಯ ಗ್ರಾಮದಲ್ಲಿ ನೆಲೆಸಿರುವ ಇಬ್ಬರು ಬಡ ಮಹಿಳೆಯರಿಗೆ ಶಾಸಕರೇ ಸ್ವಂತ ಭೂಮಿಯನ್ನು ಬಿಟ್ಟುಕೊಟ್ಟು ಮಾನವೀಯತೆ ಮೆರೆದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ಇಲ್ಲಿನ ಶಾಸಕ ಸುಕುಮಾರ ಶೆಟ್ಟಿ, ಈ ಉದಾರತೆ ತೋರಿದ ಜನಪ್ರತಿನಿಧಿ. ಬೆಳ್ಳಾಲ ಗ್ರಾಮದಲ್ಲಿ ನೆಲೆಸಿರುವ ಎರಡು ಬಡ ಕುಟುಂಬಗಳು ಸ್ವಂತ ಜಾಗವಿಲ್ಲದೆ ಪರಿತಪಿಸುತ್ತಿದ್ದವು. ಶಾಸಕರು ತನಗೆ ಸೇರಿದ ಭೂಮಿಯಲ್ಲಿ ಇವರಿಗೆ ಎರಡು ಸೈಟುಗಳನ್ನು ಮಾಡಿಕೊಟ್ಟಿದ್ದಾರೆ. ಶಾಸಕರಿಗೆ ಸೇರಿದ ಜಾಗದಲ್ಲಿ ಈ ಎರಡು ಕುಟುಂಬಗಳು ನೂರಾರು ವರ್ಷಗಳಿಂದ ವಾಸಿಸುತ್ತಿದ್ದು ಇವರಿಗೆ ಸ್ವಂತ ಭೂಮಿ ಇರಲಿಲ್ಲ. ಇದನ್ನು ಮನಗಂಡು ಶಾಸಕರು ಸ್ವಇಚ್ಛೆಯಿಂದ ಹಕ್ಕುಪತ್ರ ಮಾಡಿಕೊಟ್ಟಿದ್ದಾರೆ. ಇಬ್ಬರಿಗೂ ತಲಾ ಏಳು ಸೆಂಟ್ಸ್ ಭೂಮಿ ನೀಡಿದ್ದಾರೆ. ಬೇರೆಡೆ ವಾಸಿಸಲು ಇವರಿಬ್ಬರು ಒಪ್ಪಿರಲಿಲ್ಲ, ನಾವು ಇಲ್ಲಿಯೇ ಬಾಳಿ ಬದುಕಿದವರು ಎಂದಿದ್ದರು. ಅವರ ಪ್ರೀತಿ ವಾತ್ಸಲ್ಯಕ್ಕೆ ತಲೆ ಬಾಗಿ 2 ಕುಟುಂಬಗಳಿಗೆ ಈ ಭೂಮಿ ಬಿಟ್ಟು ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
Kshetra Samachara
02/02/2022 08:56 pm