ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸತತ ಮೂರನೇ ದಿನವೂ ದಾರಿದೀಪಕ್ಕಾಗಿ ದೊಂದಿ ಉರಿಸಿ ಪ್ರತಿಭಟನೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದಾರಿದೀಪದ ವ್ಯವಸ್ಥೆ ಇಲ್ಲದಿರುವುದನ್ನು ಪ್ರತಿಭಟಿಸಿ ನೂರು ದೊಂದಿಗಳನ್ನು ಉರಿಸಿ ರಾತ್ರಿ ಪ್ರತಿಭಟನೆ ನಡೆಯಿತು.

ಕರಾವಳಿ ಬೈಪಾಸ್ ಬಳಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಉಡುಪಿ ನಗರಸಭೆ ವಿರುದ್ಧ ಧಿಕ್ಕಾರ ಕೂಗಿದರು. ಇವತ್ತು ಅವ್ಯವಸ್ಥೆ ಸರಿಪಡಿಸದಿದ್ದಲ್ಲಿ ಉಡುಪಿ ಜಿಲ್ಲಾಡಳಿತ, ಶಾಸಕರು ಹಾಗೂ ಉಸ್ತುವಾರಿ ಮಂತ್ರಿಯವರಿಗೆ ಧಿಕ್ಕಾರ ಕೂಗುವ ಎಚ್ಚರಿಕೆಯನ್ನು ನೀಡಲಾಯಿತು.

ಕಳೆದ ಮೂರು ದಿನಗಳಿಂದ ದಾರಿದೀಪ ಉರಿಯದಿರುವುದರ ವಿರುದ್ಧ ಚಿಮಣಿ/ದೊಂದಿ ಉರಿಸಿ ವಿನೂತನ ಪ್ರತಿಭಟನೆ ನಡೆಯುತ್ತಿದ್ದು, ಅವ್ಯವಸ್ಥೆ ಸರಿ ಪಡಿಸುವತನಕ ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಭಟನಕಾರರು ಎಚ್ಚರಿಸಿದರು. ರಾತ್ರಿ ಪ್ರತಿಭಟನೆಯಲ್ಲಿ ಕರವೇ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್, ತಾಲೂಕು ಕರವೇ ಅಧ್ಯಕ್ಷ ಸುಧೀರ್ ಪೂಜಾರಿ, ಮತ್ತಾಕ್ ಅಲಿ, ಶಾಹಿಲ್ ರಹಮತುಲ್ಲಾ, ರಾಹುಲ್ ಪಿಂಟೋ ಸೇರಿದಂತೆ ಸುಮಾರು ಇಪ್ಪತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

Edited By : Nagesh Gaonkar
Kshetra Samachara

Kshetra Samachara

02/02/2022 10:25 am

Cinque Terre

17.81 K

Cinque Terre

0

ಸಂಬಂಧಿತ ಸುದ್ದಿ