ಮಂಗಳೂರು: ಕೇಂದ್ರ ಸರ್ಕಾರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ನೇತೃತ್ವದಲ್ಲಿ ಮಂಗಳೂರು ನಗರದಲ್ಲಿ ನಡೆದ ‘ಸ್ವಾಭಿಮಾನದ ನಡಿಗೆ’ ಜಾತಿ, ಮತ, ಧರ್ಮವನ್ನು ಮೀರಿ ಯಶಸ್ವಿಯಾಗಿ ನಡೆದಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮರಾಜ್ ಅವರು ತಿಳಿಸಿದ್ದಾರೆ. ಮಂಗಳೂರು ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನಮ್ಮ ಹೋರಾಟ ಒಂದು ಹಂತದ ಪ್ರಾರಂಭ ಮಾತ್ರ. ಕರ್ನಾಟಕದಲ್ಲಿ ಜಾತಿಗೊಂದರಂತೆ ನಿಗಮ ಮಂಡಳಿಯಾದರೂ ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಬಿಲ್ಲವ, ಈಡಿಗ ಸಮಾಜದ ಹೆಸರಿನಲ್ಲಿ ನಿಗಮ ಮಂಡಳಿ ಸ್ಥಾಪನೆಗೆ ಇನ್ನೂ ದಿನ ಕೂಡಿಬಂದಿಲ್ಲ.
ಹಾಗೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರು ನಾಮಕರಣ ಮಾಡಲು ಒತ್ತಾಯ ಇದೆ. ಇದು ಎರಡು ವರ್ಷದಿಂದ ಕಡತಗಳಲ್ಲೇ ಬಾಕಿಯಾಗಿದೆ. ಈ ಬಗ್ಗೆ ಪಕ್ಷಾತೀತವಾಗಿ, ಸಂಘರ್ಷ ರಹಿತವಾಗಿ ಮಾಡುತ್ತೇವೆ ಎಂದರು.
ಮುಂದಿನ ದಿನಗಳಲ್ಲಿ ಬಿಲ್ಲವರಿಗೆ ಸೂಕ್ತ ಸ್ಥಾನಕ್ಕಾಗಿ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಯಲಿದೆ.
ಗುರುಗಳ ತತ್ವದಂತೆ ಸಂಘರ್ಷ ರಹಿತವಾಗಿ ನಡೆಯುವ ಎಲ್ಲ ಹೋರಾಟಗಳಿಗೂ ಈ ಜಾಥಾ ಮುನ್ನುಡಿಯಾಗಿದೆ.
ಇದೇ ವೇಳೆ ಮುಂದಿನ ವರ್ಷ ಕರ್ನಾಟಕದಿಂದ ನಾರಾಯಣ ಗುರು ಟ್ಯಾಬ್ಲೋ ಹೋಗುತ್ತದೆ ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತ್ಯಜಿತ್ ಸುರತ್ಕಲ್, ಹರಿಕೃಷ್ಣ ಬಂಟ್ವಾಳ ಮುಖ್ಯಮಂತ್ರಿಯಲ್ಲ, ರಾಜ್ಯಾಧ್ಯಕ್ಷರೂ ಅಲ್ಲ. ಕೇವಲ ಕಿಯೋನಿಕ್ಸ್ ಸಂಸ್ಥೆಯ ನಿರ್ದೇಶಕರು. ಅವರು ಎಷ್ಟು ದಿನ ನಿಗಮದಲ್ಲಿ ಇರುತ್ತಾರೆ ಗೊತ್ತಿಲ್ಲ.
ಅವರ ಮಾತಿಗೆ ಏನು ಬೆಲೆ ಇಲ್ಲ ಎಂದರು. ಜೊತೆಗೆ ರಾಜ್ಯದ ಸಚಿವರಿಗೆ ಜಟಾಯು ಯಾವುದು ಗಂಡಬೇರುಂಢ ಯಾವುದು ಎಂಬುದು ಗೊತ್ತಿಲ್ಲ. ಪಕ್ಷವನ್ನು ಸಮರ್ಥನೆ ಮಾಡುವಾಗ ಸರಿ ಯಾವುದು ಎಂದು ಯೋಚನೆ ಮಾಡಲಿ ಸತ್ಯಜಿತ್ ಸುರತ್ಕಲ್ ಹೇಳಿದರು.
Kshetra Samachara
28/01/2022 05:55 pm