ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ನಮಗೆ ಕಾಂಗ್ರೆಸ್ ನ ಸರ್ಟಿಫಿಕೇಟ್ ಅಗತ್ಯ ಇಲ್ಲ:ಸಚಿವ ಹಾಲಪ್ಪ ಆಚಾರ್ ತಿರುಗೇಟು!

ಮಣಿಪಾಲ: ಬಿಜೆಪಿ ಸರ್ಕಾರದ ಸಾಧನೆ ಏನು ಎಂಬುದು ಜನರಿಗೆ ತಿಳಿದಿದೆ ,ಕಾಂಗ್ರೆಸ್ ನವರು ಸರ್ಟಿಫಿಕೇಟ್ ಕೊಡುವ ಅಗತ್ಯ ಇಲ್ಲ ಎಂದು ಗಣಿ ಭೂವಿಜ್ಞಾನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಕಾಂಗ್ರೆಸ್ ಕೆ ತಿರುಗೇಟು ನೀಡಿದ್ದಾರೆ.

ಉಡುಪಿಯ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟ್ವೀಟ್ ಮೂಲಕ ಹಲವಾರು ಪ್ರಶ್ನೆಗಳ ಸುರಿಮಳೆಗೈದಿದೆ. ಇದಕ್ಕೆ ಉತ್ತರ ನೀಡಿದ ಅವರು, ಕೊರೋನಾ ಕಾಲದಲ್ಲಿಯೂ ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಹಿನ್ನಡೆಯಾಗದಂತೆ ನಾವು ಕಾರ್ಯನಿರ್ವಹಿಸಿದ್ದೇವೆ. ಕೊರೋನಾ ಕಾರಣಗಳಿಂದ ಕೈಗಾರಿಕೆಗಳು ಸ್ಥಗಿತಗೊಂಡಿದ್ದವು. ಪಕ್ಕದ ರಾಜ್ಯಗಳಲ್ಲಿ ಕಾರ್ಮಿಕರಿಗೆ ಸಂಬಳ ಕೂಡ ಕೊಟ್ಟಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಒಂದು ರೂಪಾಯಿ ಕೂಡ ಬಾಕಿ ಉಳಿಸದೆ ಬೊಮ್ಮಾಯಿ ಸರಕಾರ ಎಲ್ಲ ಕಾರ್ಮಿಕರಿಗೆ ,ಸರಕಾರಿ ಉದ್ಯೋಗಿಗಳಿಗೆ ಸಂಬಳ ನೀಡಿದೆ. ನಿರುದ್ಯೋಗಿಗಳಿಗೂ ನಮ್ಮ ರಾಜ್ಯದಲ್ಲಿ ಕೆಲಸ ನೀಡಲಾಗಿದೆ ಎಂದರು.

Edited By : Shivu K
Kshetra Samachara

Kshetra Samachara

28/01/2022 05:39 pm

Cinque Terre

27.77 K

Cinque Terre

2

ಸಂಬಂಧಿತ ಸುದ್ದಿ