ಮಂಗಳೂರು: ಬಿಜೆಪಿ ಶಾಸಕರು ಕಾಂಗ್ರೆಸ್ ಜೊತೆ ಸಂಪರ್ಕ ಎಂಬ ಸುದ್ದಿ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಇಂಧನ ಸಚಿವ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ. ಎಲ್ಲಿ ಅಭದ್ರತೆ ಯಾವ ಪಕ್ಷಕ್ಕೆ ಇರುತ್ತೋ, ಅವರಿಗೆ ಅಭದ್ರತೆಯಿಂದ ಹೊರಗಿನವರನ್ನ ಕರೆದುಕೊಂಡು ಬರಬೇಕು ಅನಿಸುತ್ತೆ.
ಕಾಂಗ್ರೆಸ್ ಗೆ ಅಭದ್ರತೆ ಕಾಡ್ತಿದೆ, ಹೀಗಾಗಿ ಬೇರೆಯವರು ಬರ್ತಾರೆ ಅಂತ ಅನಿಸ್ತಿದೆ. ಇವತ್ತು ಇಡೀ ದೇಶದಲ್ಲಿ ಕಾಂಗ್ರೆಸ್ ಖಾಲಿಯಾಗ್ತಿದೆ, ರಾಜ್ಯದಲ್ಲೂ ನಿಧಾನವಾಗಿ ಖಾಲಿಯಾಗುತ್ತೆ.ನಾಡಿದ್ದಿನ ಚುನಾವಣೆಗಳಲ್ಲಿ, ಬಿಬಿಎಂಪಿಯಲ್ಲಿ ಕಾಂಗ್ರೆಸ್ ಫಲಿತಾಂಶ ನೋಡಿ. ಕಾಂಗ್ರೆಸ್ ಒಡೆದ ಮನೆಯಾಗಿದೆ, ಅವರ ಸ್ಥಿತಿ ಏನಾಗಿದೆ ಗೊತ್ತಾಗ್ತಿದೆ. ನಾವು ಬೊಮ್ಮಾಯಿ ನೇತೃತ್ವದಲ್ಲಿ ಮತ್ತೆ ಅಧಿಕಾರಕ್ಕೆ ಬರ್ತೇವೆ ಎಂದರು.
PublicNext
26/01/2022 03:04 pm