ಮಂಗಳೂರು: ಸ್ಕಾರ್ಪ್ ವಿವಾದ ಸ್ಥಳೀಯ ಮಟ್ಟದ ಸಮಸ್ಯೆ. ಅದನ್ನು ವಿದ್ಯಾರ್ಥಿನಿಯ ಪೋಷಕರು ಮತ್ತು ಆಡಳಿತ ಮಂಡಳಿಯವ್ರು ಬಗೆಹರಿಸಬೇಕು ಎಂದು ಶಾಸಕ ಯುಟಿ ಖಾದರ್ ಹೇಳಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ವಿದ್ಯಾರ್ಥಿನಿಯ ಶಿಕ್ಷಣ ಮೊಟಕಾಗಬಾರದು. ಈ ಘಟನೆಯಿಂದ ಸೃಷ್ಟಿ ಆಗುವ ಯಾವುದೇ ವಿಚಾರ ವಿದ್ಯಾರ್ಥಿಗಳ ಶಿಕ್ಷಣವನ್ನು ಮೊಟಕಿಗೊಳಿಸಬಾರದು. ವಿದ್ಯಾರ್ಥಿಗಳಿಗೆ ಮೊದಲು ಶಿಕ್ಷಣ. ಇದನ್ನು ಪ್ರಾಂಶುಪಾಲರು, ಪೋಷ ಅರ್ಥ ಮಾಡಿಕೊಳ್ಳಬೇಕು.
ಪ್ರಾಂಶುಪಾಲರು, ಆಡಳಿತ ಮಂಡಳಿಯವ್ರು ನಮ್ಮ ಮಗಳಂತೆ ಅರ್ಥ ಮಾಡಿಕೊಳ್ಳಬೇಕು. ಇದಕ್ಕೆ ಖಂಡಿತಾ ಪರಿಹಾರ ಇದೆ. ಈ ಕುರಿತು ದ್ವೇಷದಿಂದ ಯೋಚನೆ ಮಾಡಿದ್ರೆ ಪರಿಹಾರ ಸಿಗಲ್ಲ.ಇದನ್ನು ಪಾಕಿಸ್ತಾನದವರು ಟ್ವೀಟ್ ಮಾಡುವ ಅಗತ್ಯವಿಲ್ಲ ಎಂದರು.ಪಾಕಿಸ್ತಾನದ ಪರಿಸ್ಥಿತಿ ನಮ್ಮಲ್ಲಿ ಇಲ್ಲ. ನಮ್ಮಲ್ಲಿ ಎಲ್ಲರೂ ಸೌಹಾರ್ದತೆಯಿಂದ ಇದ್ದಾರೆ ಎಂದು ಹೇಳಿದರು
Kshetra Samachara
25/01/2022 05:16 pm