ಮಂಗಳೂರು: ದೆಹಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕರಿಸಿರುವುದನ್ನು ವಿರೋಧಿಸಿ ಸಂಪೂರ್ಣ ವಾಹನ ಜಾಥಾ, ಮೌನ ಮೆರವಣಿಗೆ ನಡೆಯಲಿದೆ. ಕಾಲ್ನಡಿಗೆ ಜಾಥಾಕ್ಕೆ ಅವಕಾಶವಿಲ್ಲ. ಈ ಮೆರವಣಿಗೆಯಲ್ಲಿ ಹಳದಿ ಶಾಲು, ಹಳದಿ ಧ್ವಜಕ್ಕೆ ಮಾತ್ರ ಅವಕಾಶ. ಬೇರೆ ಬಣ್ಣದ ಶಾಲು, ಧ್ವಜಗಳಿಗೆ ಅವಕಾಶವಿಲ್ಲ ಎಂದು ಬಿಲ್ಲವ ಬ್ರಿಗೇಡ್ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.
ನಗರದ ಕುದ್ರೋಳಿ ದೇವಾಲಯದಲ್ಲಿ ಮಾತನಾಡಿದ ಅವರು, 2-3 ದಿನಗಳಿಂದ ಈ ಯಾತ್ರೆಯನ್ನು ನಿಲ್ಲಿಸುವ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಇಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ತಂಡವೊಂದು ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿತ್ತು. ಆದರೆ, ಯಾವುದೇ ಕಾರಣಕ್ಕೆ ಯಾತ್ರೆಯನ್ನು ನಿಲ್ಲಿಸಲಾಗುವುದಿಲ್ಲ ಎಂದು ಪೂಜಾರಿಯವರು ಹೇಳಿದ್ದು, ಈ ಮೂಲಕ ಇದೊಂದು ವಿಫಲ ಯತ್ನವಾಗಿದೆ ಎಂದರು.
Kshetra Samachara
24/01/2022 08:08 pm