ವಿಟ್ಲ: ದೆಹಲಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ಆಘಾತಕಾರಿಯಾಗಿದ್ದು, ಇದನ್ನು ಕುಂಡಡ್ಕ ಶ್ರೀ ನಾರಾಯಣಗುರು ಸೇವಾ ಸಂಘ ಖಂಡಿಸುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಹರೀಶ್ ನೀರಕೋಡಿ ತಿಳಿಸಿದ್ದಾರೆ.
ಅವರು ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ವಿಶ್ವ ವಂದಿತರು. ಧಾರ್ಮಿಕ ಅಸಹಿಷ್ಣುತೆ ಕುರಿತು ಜನಜಾಗೃತಿ ಮೂಡಿಸಿ ಸ್ವತಃ ದೇವಾಲಯಗಳನ್ನು ನಿರ್ಮಿಸಿ ಮೂಢ ನಂಬಿಕೆ, ಕಂದಾಚಾರ ತೊಲಗಿಸಲು ಪಣ ತೊಟ್ಟ ಮಹಾನುಭಾವರು. ಗುರುಗಳು ಸರ್ವ ಧರ್ಮೀಯರಿಂದ, ಸರ್ವ ಜಾತಿಯವರಿಂದಲೂ ಗೌರವಿಸಲ್ಪಡುತ್ತಿದ್ದಾರೆ. ಸಂಬಂಧಪಟ್ಟ ಸಮಿತಿ ತನ್ನ ನಿರ್ಧಾರ ವಾಪಸ್ ಪಡೆದು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಂಡಡ್ಕ ಶ್ರೀ ನಾರಾಯಣಗುರು ಸೇವಾ ಸಂಘದ ಸಮುದಾಯ ಭವನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಎಲ್ಯಣ್ಣ ಪೂಜಾರಿ ಮೈರುಂಡ, ಕಾರ್ಯದರ್ಶಿ ಮೋಹನ ಗುರ್ಜಿನಡ್ಕ, ಸಮಿತಿ ಸದಸ್ಯ ವಿಶ್ವನಾಥ ಪೂಜಾರಿ ಕೆಮನಾಜೆ ಉಪಸ್ಥಿತರಿದ್ದರು.
Kshetra Samachara
22/01/2022 07:24 pm