ಸುರತ್ಕಲ್: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರದ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ನೀಡಿರುವ ಹೇಳಿಕೆ ಬಾಲಿಶತನದಿಂದ ಕೂಡಿದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಅನ್ನುವಂತೆ ಬಿಜೆಪಿ ಪಕ್ಷದ ರಾಜಕೀಯದಲ್ಲಿ ಸಮಾಜದಲ್ಲಿ ವಿಘಟನೆಯಾಗುತ್ತಿದೆ.
ಗುರುಗಳ ಅವಹೇಳನದ ವಿರುದ್ಧ ಹೋರಾಟಕ್ಕೆ ಇಳಿದಿದ್ದೇವೆ. ಮುಂದಿನ ಜ.26ರಂದು ನಾರಾಯಣ ಗುರುಗಳ ತತ್ವ ಆದರ್ಶದಂತೆ ಹೋರಾಟ ನಡೆಸಲಾಗುತ್ತದೆ. ಅಂದು ಪ್ರತೀ ಗುರು ಮಂದಿರದಲ್ಲಿ ಪ್ರಾರ್ಥನೆ ಮಾಡಬೇಕು, ಮೌನ ಮೆರವಣಿಗೆ ನಡೆಯಬೇಕು, ಒಂದೇ ಜಾತಿ ಒಂದೇ ಮತ ಒಂದೇ ದೇವರು ಎನ್ನುವ ಗುರುಗಳ ವಾಕ್ಯವನ್ನು ಪಾಲಿಸಬೇಕು ಎಂಬುದಾಗಿ ಕುದ್ರೋಳಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ" ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.
"ಕಾರಣ ಕೇಳಿದರೆ ಕೇಂದ್ರ ಸರಕಾರ ಮಾರ್ಗಸೂಚಿ ಎಂದು ಹೇಳುತ್ತಿದೆ. ಆದರೆ ಅದು ಯಾವ ರೀತಿಯ ಮಾರ್ಗಸೂಚಿ ಎಂದು ಹೇಳುತ್ತಿಲ್ಲ. ಮಹಿಳಾ ಸಬಲೀಕರಣ ವಿಷಯ ನೀಡಿದ್ದರಿಂದ ನಾರಾಯಣ ಗುರುಗಳ ಸ್ತಬ್ಧಚಿತ್ರ ಆದಿ ಶಂಕರಾಚಾರ್ಯರ ಸ್ತಬ್ಧ ಚಿತ್ರಕ್ಕಿಂತ ಸೂಕ್ತವಾಗಿದೆ. ಆದರೆ ಸಕಾರಣ ನೀಡದೆ ತಿರಸ್ಕರಿಸಿರುವುದು ಸರಿಯಲ್ಲ. ಬಿಜೆಪಿ ಮುಖಂಡರು ನಾರಾಯಣ ಗುರುಗಳ ತತ್ವವನ್ನು ಅರಿಯಬೇಕು. ರಾಜಕೀಯ ಲಾಭ ನಷ್ಟ ಲೆಕ್ಕಾಚಾರ ಹಾಕದೆ ಗುರುಗಳನ್ನು ಆರಾಧಿಸುವವರಿಗೆ ನ್ಯಾಯ ದೊರಕಿಸಬೇಕು" ಎಂದು ಸತ್ಯಜಿತ್ ಕರೆ ನೀಡಿದರು.
Kshetra Samachara
22/01/2022 10:15 am