ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಂಬಾರು: ರಬ್ಬರ್ ಕಾರ್ಮಿಕರಿಂದ ಕೆಎಫ್ ಡಿಸಿ ಲಾರಿ ತಡೆದು ಪ್ರತಿಭಟನೆ

ಕಡಬ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ಅಭಿವೃದ್ಧಿ ನಿಗಮದ ಮೂಜೂರು ಘಟಕದ ಕೊಂಬಾರು ಮಂಡೆಕರ ಬ್ಲಾಕ್ ನಲ್ಲಿ ಇಂದು ಕೆ.ಎಫ್.ಡಿ.ಸಿ. ರಬ್ಬರ್ ಹಾಲು ಸಾಗಾಟದ ಲಾರಿಯನ್ನು ತಡೆ ಹಿಡಿದು ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

ವೇತನ ಪರಿಷ್ಕರಣೆ, ಮೂರ್ತೆ ಮಾಡಲು ರಬ್ಬರ್ ಮರಗಳನ್ನು ಕಡಿತಗೊಳಿಸುವುದು, ಇತರ ಬೇಡಿಕೆಗಳ ಈಡೇರಿಕೆಗಾಗಿ ಮಾತುಕತೆಗೆ ದಿನಾಂಕ ನಿಗದಿಗೊಳಿಸುವುದು ಮತ್ತು 15 ವರ್ಷಗಳಿಂದಲೂ ದುಡಿಯುತ್ತಿರುವ ರಬ್ಬರ್ ಕಾರ್ಮಿಕರನ್ನು ಖಾಯಂಗೊಳಿಸುವುದು ಸೇರಿದಂತೆ ಹಲವಾರು ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕರು ಲಾರಿಯನ್ನು ತಡೆ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಅಧಿಕಾರಿಗಳು ಸ್ಥಳಕ್ಕೆ ಬಂದು ಭರವಸೆ ನೀಡುವ ತನಕ ಲಾರಿಯನ್ನು ತಡೆ ಹಿಡಿಯಲಾಗುವುದು ಎಂದು ಕಾರ್ಮಿಕರು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ರಾಜಕೃಷ್ಣ, ಗಣೇಶ್, ಶಿವ, ಮಹೇಂದ್ರ, ನಾಗರಾಜ್, ರಾಜಕೃಷ್ಣ ಓಟೆಕಜೆ, ಭಾಗೀನಾಥ್, ವಿಜಯಕುಮಾರ್ ಮೊದಲಾದವರು ಪಾಲ್ಗೊಂಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

20/01/2022 05:07 pm

Cinque Terre

4.35 K

Cinque Terre

0

ಸಂಬಂಧಿತ ಸುದ್ದಿ