ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬ್ರಿಟಿಷ್ ಬಂಗಲೆಯಲ್ಲಿ ಕಚೇರಿ ತೆರೆದ ಸಚಿವ ಎಸ್.ಅಂಗಾರ

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ - ರೊಸಾರಿಯೋ ಚರ್ಚ್ ರೋಡ್ ನಲ್ಲಿರುವ ಬ್ರಿಟಿಷ್ ಬಂಗಲೆಯಲ್ಲಿ ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌.ಅಂಗಾರ ಅವರ ಕಚೇರಿ ಇಂದು ಉದ್ಘಾಟನೆಗೊಂಡಿತು.

ಈ ಪಾರಂಪರಿಕ ಬಂಗಲೆಯು 1918 ರಿಂದ ಬ್ರಿಟಿಷ್ ಅಧಿಕಾರಿಗಳ ನಿವಾಸವಾಗಿತ್ತು. ಆಗ ಇದು ಮೆರೈನ್ ಬಂಗಲೆಯೆಂದೇ ಖ್ಯಾತಿ ಹೊಂದಿತ್ತು. ಸ್ವಾತಂತ್ರ್ಯದ ಬಳಿಕ ಬಂದರು ಮಂಡಳಿಯ ಪಾಲಾಯಿತು. 1980ರ ಬಳಿಕ ಬಂದರು ಅಧಿಕಾರಿಗಳು ಈ ಕಟ್ಟಡವನ್ನು ಬಳಸಲು ಆರಂಭಿಸಿದರು‌. ಆದರೆ ಆ ಬಳಿಕದ ನಿರ್ವಹಣೆಯ ಕೊರತೆಯಿಂದ ಬಂಗಲೆ ನಾದುರಸ್ತಿಗೊಂಡು ಪಾಳು ಬಿದ್ದಿತ್ತು. ಇದೀಗ 3 ಲಕ್ಷ ರೂ. ಖರ್ಚುವೆಚ್ಚದೊಂದಿಗೆ ಮತ್ತೆ ದುರಸ್ತಿಯಾಗಿ ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಕಚೇರಿಯಾಗಿ ಮಾಡಿಕೊಳ್ಳಲಾಗಿದೆ.

ಈ ಬಗ್ಗೆ ಎಸ್‌.ಅಂಗಾರ ಮಾತನಾಡಿ, ಮುಂದೆ ಸೋಮವಾರ ಬೆಳಗ್ಗಿನಿಂದ ಸಂಜೆಯವರೆಗೆ ಈ ಕಟ್ಟಡದಲ್ಲಿ ನಾನು ಸಾರ್ವಜನಿಕರ ಭೇಟಿಗೆ ಲಭ್ಯವಿರಲಿದ್ದೇನೆ. ಈ ಮೂಲಕ ಎಲ್ಲಾ ಮೀನುಗಾರರ ಸಮಸ್ಯೆಯನ್ನು ಆಲಿಸಲಿದ್ದೇನೆ ಎಂದು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

17/01/2022 03:35 pm

Cinque Terre

11.01 K

Cinque Terre

1

ಸಂಬಂಧಿತ ಸುದ್ದಿ