ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ನಾರಾಯಣ ಗುರುಗಳ ಸ್ತಬ್ಧಚಿತ್ರ ತಡೆ; ಕೇಂದ್ರದ ನಡೆಗೆ ಸೊರಕೆ ಖೇದ

ಕಾಪು: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಆಯ್ಕೆ ಸಮಿತಿ ತಿರಸ್ಕರಿಸಿರುವುದು ಸಮಸ್ತ ನಾರಾಯಣ ಗುರು ಆರಾಧಕರಿಗೆ ಅವಮಾನ ಮಾಡಿದಂತಾಗಿದೆ. ಕೂಡಲೇ ನಿರ್ಧಾರವನ್ನು ಮರು ಪರಿಶೀಲಿಸಿ ಅವಕಾಶ ನೀಡುವಂತೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆಗ್ರಹಿಸಿದ್ದಾರೆ.

ಮನುಕುಲದ ಒಳಿತಿಗಾಗಿ ನಿರಂತರ ಸೇವೆ ಸಲ್ಲಿಸಿದ, ಎಲ್ಲ ಜಾತಿ ಜನಾಂಗದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ, ಸಮಾಜ ಸುಧಾರಣೆಯಲ್ಲಿ ಅಗ್ರ ಪಂಕ್ತಿಯ ಸಂತರಲ್ಲಿ ಓರ್ವರಾದ ಶಾಂತಿ ಮಂತ್ರದ ಸಿದ್ಧಾಂತದಂತೆ ಸಮಾಜವನ್ನು ಪರಿವರ್ತಿಸಿದ ಏಕೈಕ ಮಹಾನ್ ಸಾಧಕ ಬ್ರಹ್ಮಶ್ರೀ ನಾರಾಯಣಗುರುಗಳು.

ಈ ಬಗ್ಗೆ ಕೇಂದ್ರ ಸರಕಾರ ಕೂಡಲೇ ತನ್ನ ನಿರ್ಧಾರ ಪುನರ್ ಪರಿಶೀಲಿಸಿ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

17/01/2022 01:38 pm

Cinque Terre

7.33 K

Cinque Terre

1

ಸಂಬಂಧಿತ ಸುದ್ದಿ