ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕೃತ; ಯು.ಟಿ.ಖಾದರ್‌ ಕಿಡಿ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ತಿರಸ್ಕರಿಸಿರುವ ಕೇಂದ್ರದ ನಿಲುವನ್ನು ನಾವೆಲ್ಲ ಖಂಡಿಸುತ್ತೇವೆ. ಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತ ಎಲ್ಲರಿಗೂ ಅದರ್ಶ ಎಂದು

ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಕೇಂದ್ರ ಸರಕಾರದ ಧೋರಣೆಗೆ ಹರಿಹಾಯ್ದಿದ್ದಾರೆ.

ಜನರು ಸ್ವಾಭಿಮಾನದಿಂದ ಹಾಗೂ ಶಿಕ್ಷಣದಿಂದ ಸಂಘಟಿತರಾಗಬೇಕು ಎಂಬುದು ನಾರಾಯಣ ಗುರುಗಳ ಅಶಯವಾಗಿತ್ತು. ಜನ ಸಾಮಾನ್ಯರೆಲ್ಲ ಏಕತೆಯಿಂದ ಬದುಕಬೇಕು ಎಂಬ ತತ್ವ ಬ್ರಹ್ಮಶ್ರಿ ನಾರಾಯಣ ಗುರುಗಳದ್ದು ಆಗಿತ್ತು. ಅದನ್ನೇ ಕೇಂದ್ರ ಸರಕಾರ ತಿರಸ್ಕರಿಸಿದೆ. ಕೇಂದ್ರ ಸರಕಾರ ಶ್ರೀ ನಾರಾಯಣ ಗುರುಗಳ ಟ್ಯಾಬ್ಲೋವನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡಬೇಕು ಹಾಗೂ

ಅವರ ತತ್ವ, ಆದರ್ಶವನ್ನು ಜನರಲ್ಲಿ ಜಾಗೃತಗೊಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದರು.

Edited By : Shivu K
Kshetra Samachara

Kshetra Samachara

17/01/2022 12:08 pm

Cinque Terre

7.39 K

Cinque Terre

12

ಸಂಬಂಧಿತ ಸುದ್ದಿ