ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸ್ರನ್ನು ತಿರಸ್ಕರಿಸಿ, ಸರ್ಕಾರ ಅವಮಾನಿಸಿದೆ"

ಮಂಗಳೂರು: ನಮ್ಮ ಸರ್ಕಾರ ಆಡಳಿತದಲ್ಲಿ ಇದ್ದಾಗ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆಯನ್ನು ಸರ್ಕಾರಿ ದಿನವನ್ನಾಗಿ ಆಚರಿಸಿದ್ದೇವು. ಆದರೆ, ಇದೀಗ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸ್ರನ್ನು ತಿರಸ್ಕರಿಸುವ ಮೂಲಕ ಸರ್ಕಾರ ಅವಮಾನಿಸಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಮಲ್ಲಿಕಟ್ಟೆಯಲ್ಲಿರೋ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ನಾರಾಯಣ ಗುರುಗಳಿಗೆ ಅಪಮಾನ ಮಾಡಿದ್ದನ್ನು ನಾನು ಖಂಡಿಸುತ್ತೇನೆ. ಇದರಿಂದ ನಮಗೆ ನೋವುಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಮಹಾನ್ ದಾರ್ಶನಿಕನಿಗೆ ಅವಮಾನ ಮಾಡಿದ್ದು ನೋವಿನ ವಿಚಾರ. ಕಾಂಗ್ರೆಸ್ ಈ ಬಗ್ಗೆ ಹೋರಾಟದ ರೂಪುರೇಷೆ ಸಿದ್ಧಪಡಿಸಲಿದೆ ಎಂದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಜಗತ್ತಿನಲ್ಲಿ ಅಪಾರ ಗೌರವವಿದೆ. ಗಾಂಧೀಜಿ ಕೂಡ ಇವರನ್ನು ಭೇಟಿ ಮಾಡಿದ್ದರು. ಆದರೆ, ಇಂತಹ ದೊಡ್ಡ ದಾರ್ಶನಿಕರ ಹೆಸರನ್ನು ನಮ್ಮ ಚೌಕಟ್ಟಿನಲ್ಲಿ ಬರಲ್ಲ ಅಂತ ಸರಕಾರ ಹೇಳಿರೋದು ಎಷ್ಟು ಸರಿ? ಒಟ್ಟಿನಲ್ಲಿ ಇವರ ಹೆಸರನ್ನು ತಿರಸ್ಕರಿಸುವುದು ಅಪಮಾನ ಎಂದು ಕಿಡಿಕಾರಿದರು.

Edited By : Shivu K
Kshetra Samachara

Kshetra Samachara

16/01/2022 01:02 pm

Cinque Terre

17.37 K

Cinque Terre

0

ಸಂಬಂಧಿತ ಸುದ್ದಿ