ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಾರಾಂತ್ಯ ಕರ್ಫ್ಯೂ ; ಸರಕಾರದ ನಡೆ ವಿರೋಧಿಸಿ ಸಿಪಿಎಂ ಪ್ರತಿಭಟನೆ

ಮಂಗಳೂರು: ವಾರಾಂತ್ಯ ಕರ್ಫ್ಯೂ ಹಾಗೂ ಕೋವಿಡ್ ನಿರ್ಬಂಧ ವಿಧಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡುತ್ತಿರುವ ರಾಜ್ಯ ಸರಕಾರದ ನಡೆ ವಿರೋಧಿಸಿ ಸಿಪಿಐಎಂ ದ.ಕ.ಜಿಲ್ಲಾ ಸಮಿತಿ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿತು.

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಜನತೆ ವಾರಾಂತ್ಯ ಕರ್ಫ್ಯೂ, ಲಾಕ್ ಡೌನ್ ನಿಂದ ಬೇಸತ್ತಿದ್ದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಸರಕಾರ ರಾಜ್ಯ ರಾಜಧಾನಿಯಲ್ಲಿದ್ದುಕೊಂಡು ಐಟಿ - ಬಿಟಿಯವರನ್ನು ಗಮನದಲ್ಲಿಟ್ಟುಕೊಂಡು ವಾರಾಂತ್ಯ ಕರ್ಫ್ಯೂ, ಲಾಕ್ ಡೌನ್ ಜಾರಿಗೊಳಿಸುತ್ತಿದ್ದಾರೆ. ಎಂಎನ್ ಸಿ, ಬಹುರಾಷ್ಟ್ರೀಯ ಕಂಪೆನಿಗಳು, ಐಟಿ - ಬಿಟಿಗಳಲ್ಲಿ ದುಡಿಯುವವರಿಗೆ ವಾರಾಂತ್ಯದಲ್ಲಿ ರಜೆ ಇರುತ್ತದೆ‌. ಆದರೆ, ಕೂಲಿ ಕಾರ್ಮಿಕರಿಗೆ ವಾರಾಂತ್ಯ ಸಂಬಳ ಆಗುವ ದಿನ. ಅಲ್ಲದೆ ಕೆಲವೊಂದು ಮಂದಿ ಆದಿತ್ಯವಾರವೂ ದುಡಿಯುತ್ತಾರೆ. ಆದ್ದರಿಂದ ಜನಪ್ರತಿನಿಧಿಗಳಿಗೆ ಜನಸಾಮಾನ್ಯರ ನೋವಿನ ಅನುಭವವಿಲ್ಲ. ಜನರ ದುಡಿಯುವ ಕ್ರಮ, ಅವರ ವೇತನಗಳ ಬಗ್ಗೆ ಅರಿವಿಲ್ಲ. ಆದ್ದರಿಂದ ನೀವು ಸರಕಾರ ನಡೆಸಲು ಅನರ್ಹರು ಎಂದರು.

ಒಮಿಕ್ರಾನ್ ಅಪಾಯಕಾರಿ ಅಲ್ಲವೆಂದು ತಜ್ಞರು ಹೇಳುತ್ತಿದ್ದಾರೆ. ಇದು ವ್ಯಾಪಕವಾಗಿ ಹರಡುವ ಸೋಂಕು ಹೌದಾದರೂ, ಜೀವಕ್ಕೆ ಅಪಾಯ ಒಡ್ಡುವಂತದ್ದಲ್ಲ. ದೇಶದಲ್ಲಿ 3-4 ಸಾವಿರ ಮಂದಿಯಲ್ಲಿ ಒಮಿಕ್ರಾನ್ ಕಾಣಿಸಿಕೊಂಡರೂ ನಿಧನರಾಗಿದ್ದು ಬೇರೆ ಕಾಯಿಲೆಗಳಿರುವ, 75 ವರ್ಷ ಮೀರಿದ ವ್ಯಕ್ತಿಯೋರ್ವರು ಮಾತ್ರ. ಆದ್ದರಿಂದ ಸರಕಾರ ಯಾಕಾಗಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ ಗೊತ್ತಾಗುತ್ತಿಲ್ಲ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.

Edited By : Nagesh Gaonkar
Kshetra Samachara

Kshetra Samachara

07/01/2022 01:44 pm

Cinque Terre

10.13 K

Cinque Terre

0

ಸಂಬಂಧಿತ ಸುದ್ದಿ