ವಿಟ್ಲ: ಕಾಂಗ್ರೆಸ್ ಪಕ್ಷದ ಗೂಂಡಾಗಳ ತಂಡ ಮತ್ತೊಮ್ಮೆ ಗೂಂಡಾಗಿರಿ ಮಾಡಿದೆ. ಇಂತಹ ಘಟನೆಯನ್ನು ನಾನು ಖಂಡಿಸುತ್ತೇನೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ವಿಟ್ಲದಲ್ಲಿ ಅವರು ಮಾಧ್ಯಮ ಪ್ರತಿನಿಧಿ ಜತೆ ಮಾತನಾಡಿದ ಅವರು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಕಾಂಗ್ರೆಸ್ ಡಿ.ಕೆ ಸುರೇಶ್ ಅವರ ತಂಡ ಗೂಂಡಗಳ ಹಾಗೇ ವರ್ತಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯಿಂದ ಅಭಿವೃದ್ಧಿ ಪರ್ವ ಪ್ರಾರಂಭಗೊಂಡಿದೆ. ಇದನ್ನು ಸಹಿದ ಡಿ.ಕೆ.ಶಿ ತಂಡ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರದ ಹಗಲು ಕಾಣುತ್ತಿರುವ ಕಾಂಗ್ರೆಸ್ ಇಂತಹ ಘಟನೆಗಳನ್ನು ಸೃಷ್ಟಿಸಿ, ಜನರಿಗೆ ವಂಚನೆ ಮಾಡುತ್ತಿದೆ. ಮುಂದಿನಗಳಲ್ಲಿ ಕಾಂಗ್ರೆಸ್ ಇಂತಹ ಚಾಳಿಯನ್ನು ಬಿಡಬೇಕು. ಜನರು ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
PublicNext
04/01/2022 01:20 pm