ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: "ಬಿಜೆಪಿಯಿಂದ ಮತದಾರರಿಗೆ ಹಣ ಹಂಚಿಕೆಯೇ ಕಾಂಗ್ರೆಸ್ ಸೋಲಿಗೆ ಕಾರಣ"

ಕಾಪು: ಕಾಂಗ್ರೆಸ್ ನ ಸಾಂಪ್ರದಾಯಿಕ ಮತ ವಿಭಜನೆ, ಬಿಜೆಪಿಯವರಿಂದ ಮತದಾರರಿಗೆ ಹಣ ಹಂಚಿಕೆ, ನಮ್ಮ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಮತದಾರರಿಗೆ ಸಮರ್ಪಕ ಮಾಹಿತಿ ತಲುಪಿಸುವಲ್ಲಿ ವಿಫಲವಾಗಿರುವುದೇ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸುವಲ್ಲಿ ಎಡವಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ಕಾಪು ರಾಜೀವ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಾವು ಅಭಿವೃದ್ಧಿ ಮುಂದಿಟ್ಟು ಮತ ಯಾಚಿಸಿದ್ದು, ಬಿಜೆಪಿ ಭಾವನಾತ್ಮಕ ವಿಚಾರವಿಟ್ಟುಕೊಂಡು ಮತ ಯಾಚಿಸಿದೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ತಕ್ಕ ರೀತಿಯಲ್ಲಿ ಉತ್ತರ ನೀಡಲು ನಾವು ಸಿದ್ಧರಾಗಲಿದ್ದೇವೆ ಎಂದರು.

ಕಾಪು ಪುರಸಭೆಗೆ 150 ಕೋಟಿ ರೂ. ಅನುದಾನ ತಾನು ತಂದಿರುವ ಬಗ್ಗೆ ಬಿಜೆಪಿಯವರು ಲೆಕ್ಕ ಕೇಳುತ್ತಿರುವ ಬಗ್ಗೆ ಅಂಕಿಅಂಶ ಸಹಿತ ಉತ್ತರ ನೀಡಿದ ಅವರು, ಕೆಲವು ಕಾಮಗಾರಿಗಳು ಆ ಸಮಯದಲ್ಲೇ ಪೂರ್ಣಗೊಂಡಿದ್ದರೆ, ಇನ್ನು ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿ ಆರಂಭಗೊಳ್ಳುವಂತಾಗಿದೆ. ಇದು ಸುಳ್ಳೋ- ಸತ್ಯವೋ ಎನ್ನುವುದರ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಶರ್ಫುದ್ದೀನ್ ಶೇಖ್, ಕಾಪು ಪುರಸಭೆ ಸದಸ್ಯರಾದ ಮಹಮ್ಮದ್ ಆಸೀಫ್, ಸತೀಶ್ಚಂದ್ರ ಮೂಳೂರು, ಮುಖಂಡರಾದ ಹರೀಶ್ ಕೆ. ನಾಯಕ್, ಲಕ್ಷ್ಮೀಶ ತಂತ್ರಿ ಕಲ್ಯ ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

03/01/2022 09:29 pm

Cinque Terre

6.15 K

Cinque Terre

2

ಸಂಬಂಧಿತ ಸುದ್ದಿ