ಉಡುಪಿ: ರಾಮನಗರ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಎದುರಲ್ಲೇ ರಾಜ್ಯದ ಸಚಿವ ಡಾ! ಸಿ.ಎನ್. ಅಶ್ವತ್ಥನಾರಾಯಣರ ಮೇಲೆ ಹಲ್ಲೆಗೆ ಮುಂದಾಗಿರುವ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಮತ್ತು ಅವರಿಗೆ ಬೆಂಬಲ ನೀಡಿರುವ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಎಸ್.ರವಿ ಯವರ ಗೂಂಡಾಗಿರಿಯನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.
ರಾಮನಗರದಲ್ಲಿ ನಡೆದಿರುವುದು ಕಾಂಗ್ರೆಸ್ ಗೂಂಡಾಗಿರಿಯ ಒಂದು ಮಾದರಿಯಷ್ಟೇ. ಗ್ರಾಮ ಮಟ್ಟದಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದವರೆಗೂ ಗೂಂಡಾಗಿರಿ, ಪಾಳೆಗಾರಿಕೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇವೇ ಮುಂತಾದವುಗಳು ಕಾಂಗ್ರೆಸ್ ರಾಜಕಾರಣದ ಮೂಲ ಸಂಸ್ಕೃತಿಯಾಗಿದೆ. ಇಂತಹ ಕಾಂಗ್ರೆಸ್ ನ ಕೀಳು ಮಟ್ಟದ ಗೂಂಡಾಗಿರಿಯಿಂದ ರಾಜ್ಯದ ಜನತೆಯನ್ನು ಪಾರು ಮಾಡಬೇಕಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
Kshetra Samachara
03/01/2022 07:58 pm