ಉಡುಪಿ: ಭಾಷಣದ ವೇಳೆ ಬೊಬ್ಬೆ ಹಾಕಿ ಅಡ್ಡಿಪಡಿಸಿದಾಗ ಬಿಜೆಪಿ ರಾಜ್ಯಾಧ್ಯಕ್ಷರು, ಅರ್ಧದಲ್ಲೇ ಭಾಷಣ ಮೊಕಟುಗೊಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ. ಬಿಜೆಪಿ ಯುವ ಮೋರ್ಚಾ ಉಡುಪಿ ನಗರದ ವತಿಯಿಂದ ಅಟಲ್ ಟ್ರೋಫಿ- 2021 ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾಟ ನಡೆಯುತ್ತಿತ್ತು. ಈ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಭಾಷಣ ಮಾಡುತ್ತಾ, ಒಂದೇ ಒಂದು ಘಟನೆ ಹೇಳಿ ಭಾಷಣ ಮುಗಿಸುತ್ತೇನೆ ಎಂದರು.ರಾತ್ರಿ ವೇಳೆ ಭಾಷಣ ಕೇಳಿ ಸುಸ್ತಾಗಿದ್ದ ಕ್ರೀಡಾಭಿಮಾನಿಗಳು ,ಈ ವೇಳೆ ಬೊಬ್ಬೆ ಹೊಡೆದು ಭಾಷಣಕ್ಕೆ ಅಡ್ಡಿ ಪಡಿಸಿದ್ದಾರೆ.ತಕ್ಷಣ ಪರಿಸ್ಥಿತಿ ಅರಿತ ನಳಿನ್ ಕುಮಾರ್ , ಕೈ ಮುಗಿದು ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ತೆರಳಿದ್ದಾರೆ. ಸದ್ಯ ರಾಜ್ಯಾಧ್ಯಕ್ಷರು ಅರ್ಧಕ್ಕೆ ಭಾಷಣ ನಿಲ್ಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ.
PublicNext
29/12/2021 03:18 pm