ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮತಾಂತರ ನಿಷೇಧ ಕಾಯ್ದೆಗೆ ಭಾರತೀಯ ಕ್ರೈಸ್ತ ಒಕ್ಕೂಟದ ವಿರೋಧ !

ಉಡುಪಿ :ಸರಕಾರ ತಂದಿರುವ ಮತಾಂತರ ನಿಷೇಧ ಕಾಯಿದೆಯು ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡ ಕಾಯ್ದೆ. ಇದಕ್ಕೆ ಸರಕಾರ

ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಎಂದು ಹೆಸರು ಕೊಟ್ಟಿದೆ. ಆದರೆ ಈ ಕಾಯ್ದೆ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟ ಹೇಳಿದೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಒಕ್ಕೂಟದ ರಾಜ್ಯ ಅಧ್ಯಕ್ಷ ಪ್ರಶಾಂತ್ ಜತ್ತನ್ನ , ಮೂಲಭೂತವಾದಿ ಸಂಘಟನೆಗಳು ಈ ಕಾಯ್ದೆಯ ದುರುಪಯೋಗ ಮಾಡುವ ಅಪಾಯವಿದೆ.ಕಾಯಿದೆಯ ಪ್ರಕಾರ ಮನೆಯಲ್ಲಿ ಪ್ರಾರ್ಥನೆ ಮಾಡುವುದಕ್ಕೆ ಅನುಮತಿ ಪಡೆಯಬೇಕು ಎಂದಿದೆ.ಏಕೆ ಅನುಮತಿ ಬೇಕು? ಶಾಲೆಯಲ್ಲಿ ಕ್ರಿಸ್ಮಸ್ ಆಚರಿಸುವುದಕ್ಕೂ ಸಂಘಟನೆಗಳು ಅಡ್ಡಿಪಡಿಸುತ್ತಿವೆ.ಮೇಲ್ನೋಟಕ್ಕೆ ಮತಾಂತರ ಎನ್ನುವುದು ದೊಡ್ಡ ಕ್ರಿಮಿನಲ್ ಅಪರಾಧ ಎಂದು ಬಿಂಬಿಸಲಾಗಿದೆ.ಮತಾಂತರವಾದ ವ್ಯಕ್ತಿಯ ಬಗ್ಗೆ ಯಾರು ಬೇಕಾದರೂ ದೂರು ಕೊಡಬಹುದು ಎಂದಿದೆ.ಇದು ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಮಾಡಿದ ಕಾಯ್ದೆ ಎಂದು ಪ್ರಶಾಂತ್ ಜತ್ತನ್ನ ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

27/12/2021 06:59 pm

Cinque Terre

10.73 K

Cinque Terre

11

ಸಂಬಂಧಿತ ಸುದ್ದಿ