ಪುತ್ತೂರು: ಮಹಾತ್ಮಾ ಗಾಂಧಿಯ ತತ್ವ, ಚಿಂತನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಗಾಂಧಿ ವಿಚಾರ ವೇದಿಕೆಯ ಪುತ್ತೂರು ಘಟಕದ ವತಿಯಿಂದ ಗಾಂಧಿ ಗ್ರಾಮ ಸಂವಾದ ಕಾರ್ಯಕ್ರಮವನ್ನು ಡಿಸೆಂಬರ್ 26 ರಂದು ಪಾಣಾಜೆಯ ದುರ್ಗಾ ಸಭಾಭವನದಲ್ಲಿ ನಡೆಸಲಾಗುವುದು ಎಂದು ಪುತ್ತೂರು ಘಟಕದ ಅಧ್ಯಕ್ಷ ಝೆವಿಯರ್ ಡಿಸೋಜಾ ತಿಳಿಸಿದರು. ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತನಾಡಿದ ಅವರು ಕಾರ್ಯಕ್ರಮ ವೇದಮೂರ್ತಿ ಶ್ರೀ ಕೃಷ್ಣ ಉಪಾಧ್ಯಾಯರ ಶಿವ ಪೂಜೆಯಿಂದ ಆರಂಭಗೊಳ್ಳಲಿದ್ದು, ಶಿವ ತತ್ವ ಮತ್ತು ಚಿಂತನೆ ವಿಚಾರದ ಬಗ್ಗೆ ಪತ್ರಕರ್ತ ಬಿ.ಎಂ.ಹನೀಫ್ ವಿಚಾರ ಮಂಡಿಸಲಿದ್ದಾರೆ.
ಗಾಂಧೀಜಿಯವರ ಧಾರ್ಮಿಕ ನಂಬಿಕೆಗಳ ಕುರಿತು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಮಾತನಾಡಲಿದ್ದಾರೆ. ಗ್ರಾಮ ಸಂವಾದದಲ್ಲಿ ಗಾಂಧಿ ವಿಚಾರ ವೇದಿಕೆಯ ಮಾತೃ ಸಮಿತಿಯ ಅಧ್ಯಕ್ಷ ಶ್ರೀಧರ್ ಭಿಡೆ, ಉಪಾಧ್ಯಕ್ಷ ಅಣ್ಣಾ ವಿನಯಚಂದ್ರ, ಅಚ್ಚುತ ಮಲ್ಕಜೆ, ಜೆಸ್ಸಿ.ಪಿ.ವಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಹಲವು ಸಾಧಕರನ್ನು ಸನ್ಮಾನಿಸಲು ನಿರ್ಧರಿಸಲಾಗಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರು ಸಾಧಕರನ್ನು ಸನ್ಮಾನಿಸಲಿದ್ದಾರೆ ಎಂದು ಅವರು ಹೇಳಿದರು.
Kshetra Samachara
23/12/2021 11:44 am