ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬೆಳಗಾವಿ ಗಡಿಯಲ್ಲಿ ಗಲಭೆ ಸೃಷ್ಟಿಸಿದ ಕಿಡಿಗೇಡಿಗಳ ಮೇಲೆ ಗೂಂಡಾಕಾಯ್ದೆ ಜಾರಿಗೊಳಿಸಿ ಗಡಿಪಾರು ಮಾಡಲಿ; ಡಾ‌.ಮಹೇಶ್ ಜೋಶಿ

ಮಂಗಳೂರು: ಬೆಳಗಾವಿ ಹಾಗೂ ಮಹಾರಾಷ್ಟ್ರ ಗಡಿಭಾಗದಲ್ಲಿ ವಿಕೃತ ಮನಸ್ಸಿನ ಕಿಡಿಗೇಡಿಗಳಿಂದ ಅಹಿತಕರ ಘಟನೆಗಳು ನಡೆದು ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ತಕ್ಷಣ ಕಿಡಿಗೇಡಿಗಳ ಮೇಲೆ ಸರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಗೂಂಡಾಕಾಯ್ದೆ ಜಾರಿಗೊಳಿಸಿ, ಗಡಿಪಾರು ಮಾಡಲಿ. ಅಲ್ಲದೆ ಎಂಇಎಸ್ ಅನ್ನು ನಿಷೇಧಗೊಳಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸುತ್ತದೆ ಎಂದು ಕಸಪಾ ನೂತನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಆಗ್ರಹಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಇಂತಹ ಕೃತ್ಯಗಳು ಕೇವಲ 1-5 ಶೇ. ಕಿಡಿಗೇಡಿಗಳಿಂದ ನಡೆಯುತ್ತಿದೆ. ಮುಂದೆ ಈ ರೀತಿಯ ಕೃತ್ಯಗಳು ನಡೆಯಲೇ ಬಾರದೆಂದು ಎರಡೂ ಕಡೆಯ ಜವಾಬ್ದಾರಿಯುತರ ಸಮಿತಿ ರಚಿಸಿ ಸಮಸ್ಯೆಯನ್ನು ಕೊನೆಗಾಣಿಸುವ ಪ್ರಯತ್ನವನ್ನು ಕಸಪಾ ಕೈಗೊಂಡಿದೆ. ಈ ಮೂಲಕ ಶಾಶ್ವತವಾದ ಪರಿಹಾರ ಮಾರ್ಗವನ್ನು ಕೈಗೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ತುಳು ಭಾಷೆಯನ್ನು ಅಧಿಕತ ರಾಜ್ಯ ಭಾಷೆಯನ್ನಾಗಿ ಮಾಡಲು, ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಕಸಪಾ ತುಳುವಿಗೆ ಬೆಂಬಲ ನೀಡುತ್ತದೆ. ಕಸಪಾ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸುವಲ್ಲಿ ಕರಾವಳಿಯ ದ.ಕ., ಉ.ಕ. ಹಾಗೂ ಉಡುಪಿ ಜಿಲ್ಲೆಗಳ ಪಾತ್ರ ದೊಡ್ಡದು. ಇಲ್ಲಿನ ಎಲ್ಲಾ ಬೂತ್ ಗಳಲ್ಲೂ ನಾನೇ ಮುಂದೆ ಇದ್ದೇನೆ. ನನ್ನನ್ನು ಮೀರಿಸಿ ಮತ ಪಡೆದವರು ಯಾರೂ ಇಲ್ಲ. ಇದೇ ಮೊದಲ ಬಾರಿಗೆ ಹಲವರು ಸೊನ್ನೆ ಮತಗಳನ್ನು ಗಳಿಸಿ ಠೇವಣಿ ಕಳೆದುಕೊಂಡಿದ್ದಾರೆ. ನನ್ನ ಮೇಲೆ ವಿಶ್ವಾಸವನ್ನಿಟ್ಟುಕೊಂಡು ಮತ ಹಾಕಿರುವ ಮತದಾರರಿಗೆ ಡಾ.ಮಹೇಶ್ ಜೋಶಿ ಅಭಿನಂದನೆಗಳನ್ನು ತಿಳಿಸಿದರು.

Edited By : Manjunath H D
Kshetra Samachara

Kshetra Samachara

21/12/2021 01:56 pm

Cinque Terre

6.78 K

Cinque Terre

0

ಸಂಬಂಧಿತ ಸುದ್ದಿ